ಅಮರಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ACB) ನ್ಯಾಯಾಲಯ ಭಾನುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
371 ಕೋಟಿ ರೂ.ಗಳ ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದ ಮೇಲೆ ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ (CID) ಶನಿವಾರ ಮುಂಜಾನೆ ಬಂಧಿಸಿದೆ.
Advertisement
Advertisement
ಈ ಪ್ರಕರಣ ಆಂಧ್ರಪ್ರದೇಶ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ (APSSDC) ರಚನೆಗೆ ಸಂಬಂಧಿಸಿದೆ. 2014 ರಲ್ಲಿ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲು ಮತ್ತು ಅನಂತಪುರ ಜಿಲ್ಲೆಯ ಕಿಯಾದಂತಹ ಕೈಗಾರಿಕೆಗಳ ಬಳಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಬಂಧವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಈ ಪ್ರಕರಣದಲ್ಲಿ ಮುಖ್ಯ ಸಂಚುಕೋರನಂತೆ ವರ್ತಿಸಿದ್ದು, ಎಪಿಎಸ್‌ಎಸ್‌ಡಿಸಿಯ ಸೋಗಿನಲ್ಲಿ 371 ಕೋಟಿ ರೂ.ಗಳ ಹಗರಣವನ್ನು ನಡೆಸಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತ ಎಂಬ ಮರುನಾಮಕರಣವನ್ನು ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ಎಂಪಿ
Advertisement
ಚಂದ್ರಬಾಬು ನಾಯ್ಡು ಅವರು 2014 ರಿಂದ 2019 ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭ ಆಂಧ್ರಪ್ರದೇಶದ ಸರ್ಕಾರ ಎಪಿಎಸ್‌ಎಸ್‌ಡಿಸಿ ಯೋಜನೆಗಾಗಿ ಜರ್ಮನ್ ಎಂಜಿನಿಯರಿಂಗ್ ದೈತ್ಯ ಸೀಮೆನ್ಸ್ನೊಂದಿಗೆ ಪಾಲುದಾರಿಕೆ ಹೊಂದಿತ್ತು. 6 ಶ್ರೇಷ್ಠ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯವನ್ನು ಸೀಮೆನ್ಸ್ಗೆ ವಹಿಸಲಾಗಿತ್ತು. ಆದರೆ ಸೀಮೆನ್ಸ್ ಯೋಜನೆಗೆ ಯಾವುದೇ ಹಣವನ್ನು ಹೂಡಿಕೆ ಮಾಡದಿದ್ದರೂ ರಾಜ್ಯ ಸರ್ಕಾರ ಯೋಜನೆಗೆ 371 ಕೋಟಿ ರೂ. ಬಿಡುಗಡೆ ಮಾಡಿತ್ತು.
Advertisement
ಇದೀಗ ಆಂಧ್ರಪ್ರದೇಶದ ಮಾಜಿ ಸಿಎಂ ಅವರನ್ನು ಸಂಬಂಧಿತ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಇದರಲ್ಲಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ) ಮತ್ತು 465 (ನಕಲಿ) ಸೇರಿವೆ. ಆಂಧ್ರಪ್ರದೇಶದ ಸಿಐಡಿ ಕೂಡ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿದೆ. ಇದನ್ನೂ ಓದಿ: ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ನೌಕರರ ಹಕ್ಕು: ರಾಮಲಿಂಗಾ ರೆಡ್ಡಿ
Web Stories