ಲಕ್ನೋ: 1977ರ ನಂತರ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ (Samajwadi Party leader Azam Khan) ಮತ್ತು ಅವರ ಕುಟುಂಬಸ್ಥರು ರಾಮ್ಪುರ (Rampur) ವಿಧಾನಸಭಾ ಸ್ಥಾನ (Assembly seat) ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.
Advertisement
ದ್ವೇಷ ಭಾಷಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಜಂ ಖಾನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಬಳಿಕ ತೆರವಾದ ಸ್ಥಾನಕ್ಕೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ. ಸಮಾಜವಾದಿ ಪಕ್ಷವು ಅಜಂ ಖಾನ್ ಅವರ ಪತ್ನಿ ತಂಜೀನ್ ಫಾತಿಮಾ (Tanzeen Fatima) ಅಥವಾ ಅವರ ಸೊಸೆಯನ್ನು ಕಣಕ್ಕಿಳಿಸುತ್ತಿಲ್ಲ. ಬದಲಾಗಿ ಅಸೀಮ್ ರಜಾಗೆ (Asim Raza) ಟಿಕೆಟ್ ನೀಡಿದೆ. ಅಜಂ ಖಾನ್ ಅಥವಾ ಅವರ ಕುಟುಂಬಸ್ಥರು 1977 ರಿಂದ ಈ ಕ್ಷೇತ್ರದಿಂದ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
Advertisement
Advertisement
ಅಜಂ ಖಾನ್ ಅವರು 1977 ರಿಂದ 2022 ರವರೆಗೆ 12 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅದರಲ್ಲಿ ಹತ್ತು ಬಾರಿ ಗೆದ್ದಿದ್ದಾರೆ ಮತ್ತು ಎರಡು ಬಾರಿ ಸೋತಿದ್ದಾರೆ. 2019ರಲ್ಲಿ ಅಜಂ ಖಾನ್ ಸಂಸತ್ ಸದಸ್ಯರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ತಜೀನ್ ಫಾತ್ಮಾ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಅಸೀಂ ರಾಜಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ: ಇರಾನ್ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು
Advertisement
ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಕಾಂಗ್ರೆಸ್ (Congress) ಪ್ರಬಲ ಶಕ್ತಿ ಹೊಂದಿದ್ದ ಪಕ್ಷವಾಗಿತ್ತು. 1980 ಮತ್ತು 1993ರ ನಡುವೆ, ಅಜಂ ಖಾನ್ ಐದು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸತತವಾಗಿ ಗೆದ್ದರು. ಆದರೆ 1996ರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಅಫ್ರೋಜ್ ಅಲಿ ಖಾನ್ ವಿರುದ್ಧ ಸೋತರು. ಅಜಂ ಖಾನ್ ಅವರನ್ನು ರಾಜ್ಯಸಭೆಗೆ ಕಳುಹಿಸಲಾಯಿತು. ನಂತರ ಅವರು 2002 ಮತ್ತು 2022ರ ನಡುವೆ ಮತ್ತೆ ಸತತವಾಗಿ ಐದು ಬಾರಿ ಚುನಾವಣೆಯಲ್ಲಿ ಗೆದ್ದರು. ಇದನ್ನೂ ಓದಿ: ಡೇಟಿಂಗ್ ಆ್ಯಪ್, ಲೀವ್ ಇನ್ ಟುಗೆದರ್ ಹಾವಳಿ- ಕಾಲೇಜುಗಳಲ್ಲಿ ಮಹಿಳಾ ಆಯೋಗದಿಂದ ಸ್ಪೆಷಲ್ ಕ್ಲಾಸ್
ಅಜಂ ಖಾನ್ ಮತ್ತು ಅವರ ಕುಟುಂಬ ಕಾನೂನು ಮೊಕದ್ದಮೆಗಳನ್ನು ಎದುರಿಸಿದೆ. 2014ರಲ್ಲಿ ಅಖಿಲೇಶ್ ಯಾದವ್ (Akhilesh Yadav) ಸರ್ಕಾರದಲ್ಲಿ ಸಚಿವರಾಗಿದ್ದಾಗ ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದ ಆರೋಪದಡಿ ಅಜಂ ಖಾನ್ ಅವರ ಪತ್ನಿ ಮತ್ತು ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ನಂತರ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಾಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅಜಂ ಖಾನ್ ಅವರನ್ನು ಅಸೆಂಬ್ಲಿ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.