‘ಫೈರ್‌ ಫ್ಲೈ’ ಶೂಟಿಂಗ್ ಮುಕ್ತಾಯ- ಮರೆಯಲಾಗದ ಪಯಣ ಎಂದ ನಿವೇದಿತಾ ಶಿವರಾಜ್‌ಕುಮಾರ್

Public TV
2 Min Read
shivarajkumar 2

ಟ ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಫೈರ್‌ ಫ್ಲೈ’ (Firefly Kannada) ಚಿತ್ರೀಕರಣ ಮುಕ್ತಾಯಗೊಂಡಿದೆ. ‘ಫೈರ್‌ ಫ್ಲೈ’ ಶೂಟಿಂಗ್ ಜರ್ನಿಯ ಝಲಕ್ ನ್ನು ಚಿತ್ರತಂಡ ಹಂಚಿಕೊಂಡು, ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಇದನ್ನೂ ಓದಿ:‘ರೈಸ್ 4’ಗಾಗಿ ಸೈಫ್ ಅಲಿ ಖಾನ್ ಜೊತೆ ಕೈಜೋಡಿಸಿದ ಸಿದ್ಧಾರ್ಥ್ ಮಲ್ಹೋತ್ರಾ

fire fly kannada

‘ಫೈರ್‌ ಫ್ಲೈ’ ಪಯಣದ ಬಗ್ಗೆ ನಿವೇದಿತಾ ಶಿವರಾಜ್ ಕುಮಾರ್ (Niveditha Shivarajkumar) ಮನದ ಮಾತನ್ನು ಹಂಚಿಕೊಂಡಿದ್ದಾರೆ. ಚಿಕ್ಕವಳಿದ್ದಾಗಿನಿಂದಲೂ ಸಿನಿಮಾ ಮತ್ತು ಕಥೆಗಳೊಡನೆ ಬೆಳೆದವಳು ನಾನು ಅಂದಿನಿಂದಲೂ ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ ‘ಫೈರ್‌ ಫ್ಲೈ’ ಸಿನಿಮಾ. ಇದರ ಚಿತ್ರೀಕರಣ ಇನ್ನೇನು ಮುಗಿಯುತ್ತಿರಲು, ಚಿತ್ರ ತಂಡದ ನಾವಿಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು. ಅತ್ಯದ್ಭುತ ಪ್ರತಿಭೆಗಳು ಹಾಗೂ ನನ್ನ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರೂ ಹಾಗೂ ಅವರೊಡನೆ ಮೂಡಿದ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು.

Fire fly 2

ಶುರುವಾದ ಪ್ರತಿಯೊಂದು ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ ‘ಫೈರ್‌ ಫ್ಲೈ’ ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ ಎಂದು ಪತ್ರದ ಮೂಲಕ ಮನದ ಮಾತು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ – ರೇಣುಕಾಸ್ವಾಮಿ ತಂದೆ ಕಣ್ಣೀರು

Fire fly 3

ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶಕನಾಗಿಯೂ ಬಣ್ಣ ಹಚ್ಚಿರುವ ‘ಫೈರ್ ಫ್ಲೈ’ ನಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಹಿರಿಯ ಕಲಾವಿದ ಮೂಗು ಸುರೇಶ್ ಅಭಿನಯಿಸಿದ್ದಾರೆ. ವಂಶಿಗೆ ಜೋಡಿಯಾಗಿ ರಚನಾ ಇಂದರ್ ಸಾಥ್ ಕೊಟ್ಟಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ನಾಯಕ- ನಿರ್ದೇಶಕ ವಂಶಿಗೆ ಇಲ್ಲಿ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡುತ್ತಿದೆ.

Share This Article