ಸಮಾಜ ಇರೋದೇ ಹೀಗೆ.. ಹೆಣ್ಣು ಮಕ್ಕಳನ್ನೇ ದೂಷಿಸ್ತಾರೆ – ಕೆಟ್ಟ ಟ್ರೋಲ್‌ ಬಗ್ಗೆ ನಿವಿ ಖಡಕ್‌ ಮಾತು

Public TV
1 Min Read
niveditha gowda

ಟ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) 9 ತಿಂಗಳ ನಂತರ ಮತ್ತೆ ಮುಖಾಮುಖಿಯಾಗಿದ್ದಾರೆ. ಒಂದೇ ಸಿನಿಮಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಟಿಸಿದ್ದಾರೆ. ಇಂದು ‘ಮುದ್ದು ರಾಕ್ಷಸಿ’ ಸಿನಿಮಾದ ಕೊನೆ ದಿನ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ, ನಿವೇದಿತಾ ಗೌಡ ತಮಗಾದ ಕೆಟ್ಟ ಟ್ರೋಲ್‌ಗಳ (Trolls) ಬಗ್ಗೆ ಮಾತನಾಡಿದ್ದಾರೆ.

ಈ ಸಮಾಜನೇ ಹೀಗೆ ಸದಾ ಹೆಣ್ಣು ಮಕ್ಕಳನ್ನ ದೂಷಿಸುತ್ತಾರೆ. ಎಷ್ಟಾದ್ರೂ ಸೊಸೈಟಿ ಬದಲಾಗಲ್ಲ ಹುಡುಗಿಯರನ್ನೇ ಬ್ಲೇಮ್ ಮಾಡುತ್ತಾರೆ. ಮಾತನಾಡೋಕೆ ಅವಕಾಶ ಇದೆ ಅಂತ ಮಾಡ್ತೀರಾ ಮಾಡಿ ಪರವಾಗಿಲ್ಲ ಎಂದಿದ್ದಾರೆ. ನನಗೇನು ಬೇಜಾರಾಗಲ್ಲ, ನೋವು ಆಗಲ್ಲ, ನಾನು ಟ್ರೋಲ್ ಬಗ್ಗೆ ಕೇರ್ ಮಾಡಲ್ಲ. ಇನ್ನು ಟ್ರೋಲ್ ಮಾಡಿ ಸುಮ್ಮನೆ ನೋಡ್ತೀನಿ ಅಷ್ಟೇ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಬೋಲ್ಡ್ ಆಗಿ ನಿವೇದಿತಾ ಹೇಳಿದ್ದಾರೆ.

ಈ ವೇಳೆ, ಚಂದನ್ ಜೊತೆ ಮತ್ತೆ ಒಂದಾಗ್ತಾರಾ ಎಂಬುದರ ಬಗ್ಗೆ ಮಾತನಾಡಿ, ಡಿವೋರ್ಸ್ ಆಗಿ ಒಂದಾಗಿರೋ ಕಪಲ್ಸ್ ಅಲ್ಲಿ ಅಷ್ಟು ಪ್ರೀತಿ ಇತ್ತೇನೋ ಒಂದಾಗಿದ್ದಾರೆ. ನಮ್ಮಲ್ಲಿ ಆ ತರಹ ಅನ್ಯೋನ್ಯತೆ ಇರಲಿಲ್ಲ ಎಂದು ಮತ್ತೆ ನಾವು ಒಂದಾಗಲ್ಲ ಅಂತ ನೇರವಾಗಿ ನಿವೇದಿತಾ ಗೌಡ ಮಾತನಾಡಿದ್ದಾರೆ.

ಇನ್ನೂ ‘ಮುದ್ದು ರಾಕ್ಷಸಿ’ ಸಿನಿಮಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೊತೆಯಾಗಿ ನಟಿಸಿದ್ದಾರೆ‌. ಪುನೀತ್ ಶ್ರೀನಿವಾಸ್ ಈ‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Share This Article