ಬೆಂಗಳೂರು: ಯುವ ದಸರಾ ವೇದಿಕೆ ಮೇಲೆ ರ‍್ಯಾಪರ್ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ನಿವೇದಿತಾ ಗೌಡ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ತಿರುಗೇಟು ಕೊಟ್ಟಿದ್ದಾರೆ.
ಭಾನುವಾರ ವಿಡಿಯೋ ಪೋಸ್ಟ್ ಮಾಡಿ, ನಾನು ಚಂದನ್ ಅವರನ್ನು ತುಂಬಾ ಇಷ್ಟಪಡುತ್ತೇನೆ. ಅದೊಂದು ಡ್ರೀಮಿ ಪ್ರಪೋಸಲ್ ಆಗಿತ್ತು. ಈ ಹ್ಯಾಂಗ್‍ಓವರ್‍ನಿಂದ ಹೊರಗೆ ಬರಲಾಗುತ್ತಿಲ್ಲ. ಕೊನೆಗೂ ನನಗೆ ನನ್ನ ಪ್ರಿನ್ಸ್ ಚಾರ್ಮಿಂಗ್ ಸಿಕ್ಕಿದ್ದಾರೆ. ನಮ್ಮ ಪ್ರೀತಿಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ:ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ
https://www.instagram.com/p/B3Rh6WXAVbr/
ಆದರೆ ನಮ್ಮ ಪ್ರೀತಿಯ ವಿಚಾರಕ್ಕೆ ಯಾಕೆ ಕೆಲವರು ಬೇಸರವಾಗಿದ್ದೀರಾ ಎಂದು ತಿಳಿಯುತ್ತಿಲ್ಲ. ನಮ್ಮ ವಿಚಾರಕ್ಕೆ ನೀವು ಬೇಸರಗೊಳ್ಳಲು ಯಾವುದೇ ಕಾರಣ ನನಗೆ ಕಾಣುತ್ತಿಲ್ಲ. ನಾವು ಮದುವೆಯಾಗಿಲ್ಲ, ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಚಂದನ್ ನನಗೆ ಪ್ರೇಮ ನಿವೇದನೆ ಮಾಡಿದ್ದಾರೆ, ನಾನು ಖುಷಿಯಿಂದ ಒಪ್ಪಿಕೊಂಡೆ. ಸ್ಪಷ್ಟ ಮನಸ್ಥಿತಿಯನ್ನು ಇಟ್ಟುಕೊಂಡು ಸಂತೋಷ, ಪ್ರೀತಿ ಹಂಚೋಣ ಎಂದು ಬರೆದು ಅವರ ಜೊತೆ ಚಂದನ್ ಇರುವ ವೀಡಿಯೋವನ್ನು ಹಾಕಿ ಪೋಸ್ಟ್ ಮಾಡಿ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ, ನಿವೇದಿತಾ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು
ಈ ಹಿಂದೆ ಯುವ ದಸರಾ ವೇದಿಕೆಯನ್ನು ಚಂದನ್ ಶೆಟ್ಟಿ ದುರ್ಬಳಕೆ ಮಾಡಿಕೊಂಡರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ನಿವೇದಿತಾ ಗೌಡ, ನಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕರು ಮಾತನಾಡಿದ್ದಾರೆ. ನಾವು ಕಪಲ್ಸ್, ಫ್ರೆಂಡ್ಸ್ ಅಂತ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕೆಲವರು ರೂಮರ್ಸ್ ಎಬ್ಬಿಸಿದರು. ಯುವ ದಸರಾದಲ್ಲಿ ಪ್ರಪೋಸ್ ಮಾಡಿದ್ದರಲ್ಲಿ ತಪ್ಪೇನಿದೆ? ವೇದಿಕೆಯನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಂಡಿಲ್ಲ. ಒಂದು ವೇಳೆ ವೇದಿಕೆ ಮೇಲೆ ಮದುವೆ ಆಗಿದ್ದರೆ ತಪ್ಪಾಗುತಿತ್ತು ಎಂದು ಸ್ಪಷ್ಟನೆ ನೀಡಿದ್ದರು.
ವೇದಿಕೆ ಮೇಲೆ, ಜನ ಸಮೂಹದ ಮುಂದೆ `ನೀನು ನನ್ನ ಮದುವೆ ಆಗುತ್ತೀಯಾ’ ಅಂತ ಚಂದನ್ ಪ್ರಪೋಸ್ ಮಾಡಿದ್ದಾರೆ. ಐದು ನಿಮಿಷದಲ್ಲಿ ಎಲ್ಲವೂ ನಡೆದು ಹೋಯಿತು. ಕಾರ್ಯಕ್ರಮದಲ್ಲಿ ಸೇರಿದ್ದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಆಶೀರ್ವಾದ ಮಾಡಿದ್ದಾರೆ. ಇದರಲ್ಲಿ ನನಗೆ ಖುಷಿ ಇದೆ. ಇದರಲ್ಲಿ ತಪ್ಪು ಆಗಿದ್ದೇನು ಎಂದು ಪ್ರಶ್ನಿಸಿದ್ದರು.