ಪಾಟ್ನಾ: ಬಿಹಾರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆಯೇ ಇಲ್ಲವೇ ಎನ್ನುವುದು ಜನರಿಗೆ ತಿಳಿದಿದೆ. ಯಾರೊಬ್ಬರ ಅಭಿಪ್ರಾಯವು ನನಗೆ ಮುಖ್ಯವಲ್ಲ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 15 ವರ್ಷಗಳಲ್ಲಿ ಏನಾಗಿದೆ ಎಂಬುದು ನಿಮಗೆ ತಿಳಿದಿರುವ ಕಾರಣ, ಪ್ರಶಾಂತ್ ಕಿಶೋರ್ ಅವರಿಗೆ ಪ್ರತಿಕ್ರಿಯೆಯನ್ನು ನೀವೇ ನೀಡಬೇಕೆಂದು ನಾನು ವಿನಂತಿಸುತ್ತೇನೆ. ಯಾರಾದರೂ ಏನಾದರೂ ಹೇಳಿದಾಗ, ಅದಕ್ಕೆ ನಾವು ಪ್ರತಿಕ್ರಿಯಿಸಬೇಕು. ಆದರೆ, ಈ ಸಂದರ್ಭದಲ್ಲಿ ಅದನ್ನು ನೀವೇ ಮಾಡಬಹುದು. ಏಕೆಂದರೆ, ವಾಸ್ತವ ಏನೆಂದು ನಿಮಗೆ ಗೊತ್ತಿದೆ ಎಂದು ಹೇಳಿದರು.
- Advertisement
ಗುರುವಾರ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು, 30 ವರ್ಷಗಳಿಂದ ಆಳುತ್ತಿರುವ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರಿಂದಾಗಿ ಬಿಹಾರವು ದೇಶದ ಅತ್ಯಂತ ಹಿಂದುಳಿದ ಮತ್ತು ಬಡ ರಾಜ್ಯವಾಗಿದೆ ಎಂದು ಟೀಕಿಸಿದ್ದರು. ಇದನ್ನೂ ಓದಿ: 10 ಸಾವಿರ ಶಾಶ್ವತ ಕೊರೊನಾ ಟೆಸ್ಟಿಂಗ್ ಸೆಂಟರ್ ತೆರೆದ ಚೀನಾ
- Advertisement
ಬಿಹಾರವು ಮುಂದುವರಿದ ರಾಜ್ಯಗಳ ವರ್ಗಕ್ಕೆ ಬರಬೇಕಾದರೆ, ಕಳೆದ 10ರಿಂದ 15 ವರ್ಷಗಳ ಹಿಂದಿನ ಹಾದಿಯಲ್ಲಿ ನಡೆದುಕೊಂಡು ನಾವು ಅಲ್ಲಿಗೆ ತಲುಪಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಯುವ ನಾಯಕತ್ವ ಬರಲಿದೆ, ಬ್ಯಾಚ್ ವೈಸ್ ಪಕ್ಷಕ್ಕೆ ಸೇರ್ಪಡೆ ಎಂದ ಸಿಎಂ
ನನಗೆ ನಿತೀಶ್ ಕುಮಾರ್ ಜೊತೆ ಯಾವುದೇ ವೈಯುಕ್ತಿಕ ಜಗಳವಿಲ್ಲ. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ. ಆದರೆ ವೈಯಕ್ತಿಕ ಸಂಬಂಧಗಳು ಇದ್ದರೂ, ಒಟ್ಟಿಗೆ ಕೆಲಸ ಮಾಡುವುದು ಮತ್ತು ಒಪ್ಪಿಕೊಳ್ಳುವುದು ಬೇರೆಯಾಗಿದೆ. ನಿತೀಶ್ ಕುಮಾರ್ ನನ್ನನ್ನು ಸಭೆಗೆ ಕರೆದರೆ ನಾನು ಹೋಗಬೇಕಾಗುತ್ತದೆ. ಆದರೆ ಹಾಗಾಗುವುದಿಲ್ಲ ಎಂದು ಅವರು ಹೇಳಿದ್ದರು.