ಬಿಜೆಪಿ- ಜೆಡಿಯು ಮೈತ್ರಿಗೆ ಗುಡ್‌ಬೈ – ನಿತೀಶ್‌ ರಾಜೀನಾಮೆಗೆ ಕಾರಣ ಏನು?

Public TV
2 Min Read
narendra modi nitish kumar

ಪಾಟ್ನಾ: ಬಿಹಾರದ ರಾಜ್ಯ ರಾಜಕೀಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಬಿಜೆಪಿ ಮೈತ್ರಿಯನ್ನು ನಿತೀಶ್ ಕುಮಾರ್ ತೊರೆದಿದ್ದಾರೆ. ವಿಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಲು ನಿತೀಶ್ ಮುಂದಾಗಿದ್ದಾರೆ.

ದೇಶದ ರಾಜಕೀಯದಲ್ಲಿ ಮಹತ್ವದ ಸ್ಥಾನ ಪಡೆದಿರುವ ಬಿಹಾರದಲ್ಲಿ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ. ಕಳೆದ ಮೂರು ವರ್ಷಗಳಿಂದ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ನಡೆಸುತ್ತಿದ್ದ ಸಿಎಂ ನಿತೀಶ್ ಕುಮಾರ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಿಜೆಪಿ ಜೊತೆಗಿನ ಮೈತ್ರಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ

BJP Flage

ಆರ್‌ಜೆಡಿ, ಕಾಂಗ್ರೆಸ್ ಸಂಪರ್ಕದಲ್ಲಿದ್ದ ನಿತೀಶ್ ಕುಮಾರ್ ಇಂದು ಬೆಳಗ್ಗೆ ಶಾಸಕರ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಜೆಪಿ ಮೈತ್ರಿ ತೊರೆಯುತ್ತಿದ್ದು, ವಿಪಕ್ಷಗಳ ಜೊತೆಗೆ ಸರ್ಕಾರ ರಚನೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಿತೀಶ್ ಕುಮಾರ್ ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಲಿದ್ದಾರೆ.

ಬಿಹಾರದಲ್ಲಿ ಒಂದೊಮ್ಮೆ ಅತಿದೊಡ್ಡ ಪಕ್ಷವಾಗಿದ್ದ ಜೆಡಿಯು ಕಳೆದ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ಕುಸಿದಿತ್ತು. ಬಿಜೆಪಿ ಅಧಿಕಾರವನ್ನು ಬಳಸಿಕೊಂಡು ತಳ ಮಟ್ಟದಲ್ಲಿ ಸಂಘಟನೆ ಮಾಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿಯೂ ಅಧಿಕಾರ ರಚನೆ ಮಾಡುವ ಸಾಧ್ಯತೆಗಳಿವೆ. ಹೀಗೆ ಆದರೆ ಬಿಜೆಪಿ ಜೆಡಿಯು ಅನ್ನು ಓವರ್ ಟೇಕ್ ಮಾಡಲಿದೆ ಎನ್ನುವ ಭೀತಿಯೂ ನಿತೀಶ್ ಕುಮಾರ್‌ಗೆ ಕಾಡುತ್ತಿದ್ದು ಪಕ್ಷವನ್ನು ಉಳಿಸಿಕೊಳ್ಳಲು ಮೈತ್ರಿಯಿಂದ ಹೊರ ಬಂದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Nitish Kumar

ನಿತೀಶ್ ಕುಮಾರ್ ಅವರ ಈ ನಿರ್ಧಾರ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಅವರ ಮುಂದಿನ ನಡೆಗಳು ಕುತೂಹಲ ಮೂಡಿಸಿದೆ. ಮುಂದೆ ಯಾವುದೇ ಆಯ್ಕೆ ಇಲ್ಲದ ಬಿಜೆಪಿ ಸದ್ಯಕ್ಕೆ ಬಿಹಾರ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದನ್ನೂ ಓದಿ: ಸಮಂತಾ ಮಾಜಿ ಪತಿ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

ನಿತೀಶ್ ನಿರ್ಧಾರಕ್ಕೆ ಕಾರಣಗಳೇನು?

  • ಬಿಜೆಪಿ ಹೈಕಮಾಂಡ್ ಬಿಹಾರದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ.
  • ಬಿಜೆಪಿಯು ತನ್ನ ಕಡೆಯಿಂದ ಆಯ್ಕೆ ಮಾಡಿ ಕಳಿಸುತ್ತಿರುವ ಸಚಿವರ ಕಾರ್ಯವೈಖರಿ ಸರಿಯಾಗಿಲ್ಲ.
  • ನಿತೀಶ್ ಕುಮಾರ್‌ಗೆ ಈ ಸಚಿವರು ಸುಗಮ ಸರ್ಕಾರ ನಡೆಸಲು ಅವಕಾಶ ಮಾಡಿಕೊಡುತ್ತಿಲ್ಲ.
  • ಬಿಹಾರ ವಿಧಾನಸಭೆಯ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಸರ್ಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ. ಆದರೂ ಅವರನ್ನು ಬದಲಾವಣೆ ಮಾಡುತ್ತಿಲ್ಲ.
  • ಬಿಜೆಪಿ ನಾಯಕರು ಜೆಡಿಯು ಬಂಡಾಯ ನಾಯಕ ಆರ್‌ಸಿಪಿ ಸಿಂಗ್ ಜೊತೆಗೂಡಿ ಮಹಾರಾಷ್ಟ್ರ ಮಾದರಿಯಲ್ಲಿ ಪಕ್ಷವನ್ನು ಮುಳಿಗಿಸಲು ಸಂಚು ರೂಪಿಸಿದ್ದಾರೆ ಎನ್ನುವುದು ಎಲ್ಲದಕ್ಕಿಂತ ದೊಡ್ಡ ಆರೋಪ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *