ಇಂಫಾಲ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಮಣಿಪುರದ 6 ಶಾಸಕರ ಪೈಕಿ ಐವರು ಶುಕ್ರವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜೆಡಿಯುನ ಐವರು ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುವುದನ್ನು ಅಂಗೀಕರಿಸಲು ಸ್ಪೀಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಪಕ್ಷವನ್ನು ಬದಲಾಯಿಸಿದ ಸಂಖ್ಯೆ ಒಟ್ಟು ಮೂರನೇ ಎರಡರಷ್ಟಕ್ಕೆ ಹೆಚ್ಚಿದೆ ಎಂದು ಮಣಿಪುರದ ವಿಧಾನಸಭೆ ಕಾರ್ಯದರ್ಶಿ ಕೆ. ಮೇಘಜಿತ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಪ್ರತಿಭಟನೆ ವೇಳೆ ಪಲಾಯನಗೈದಿದ್ದ ಶ್ರೀಲಂಕಾ ಮಾಜಿ ಅಧ್ಯಕ್ಷ ತಾಯ್ನಾಡಿಗೆ ವಾಪಸ್
Advertisement
Advertisement
ಈಶಾನ್ಯ ಭಾಗದಲ್ಲಿ ನಿತೀಶ್ ಕುಮಾರ್ ಅವರ ಪಕ್ಷದಿಂದ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದು ಇದು 2ನೇ ಬಾರಿಯಾಗಿದೆ. 2020ರಲ್ಲಿ ಅರುಣಾಚಲ ಪ್ರದೇಶದಲ್ಲಿ 7 ಜೆಡಿಯು ಶಾಸಕರ ಪೈಕಿ 6 ಮಂದಿ ಬಿಜೆಪಿ ಸೇರಿದ್ದರು. ಕಳೆದ ವಾರ ಒಬ್ಬ ಶಾಸಕ ಬಿಜೆಪಿಯೊಂದಿಗೆ ವಿಲೀನವಾಗಿದ್ದರು. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್ – ಮಕ್ಕಳ ಆಯೋಗದಿಂದ ಮಾಹಿತಿ
Advertisement
ಈ ವರ್ಷ ಮಾರ್ಚ್ನಲ್ಲಿ ಮಣಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ 38 ಕ್ಷೇತ್ರಗಳ ಪೈಕಿ 6 ಸ್ಥಾನಗಳನ್ನು ಗೆದ್ದಿತ್ತು. ಇದೀಗ ಬಿಜೆಪಿಗೆ ಕೆ.ಹೆಚ್ ಜೋಯ್ಕಿಶನ್, ಎನ್ ಸನತೆ, ಎಂ.ಡಿ ಅಚಾಬ್ ಉದ್ದೀನ್, ಮಾಜಿ ಡಿಜಿಪಿ ಎಲ್.ಎಂ ಖೌಟೆ ಹಾಗೂ ತಂಗಜಮ್ ಅರುಣ್‌ಕುಮಾರ್ ಸೇರ್ಪಡೆಯಾಗಿದ್ದಾರೆ.