ChitradurgaKarnatakaLatestLeading NewsMain Post

ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್‌ – ಮಕ್ಕಳ ಆಯೋಗದಿಂದ ಮಾಹಿತಿ

ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಬೆನ್ನಲ್ಲೇ ಮಠದ ಹಾಸ್ಟೆಲ್‌ ವಿದ್ಯಾರ್ಥಿನಿಯರ ಭವಿಷ್ಯದ ಬಗ್ಗೆ ಚಿಂತೆ ಎದುರಾಗಿದೆ. ಮುರುಘಾ ಮಠದಲ್ಲಿರುವ ವಿದ್ಯಾರ್ಥಿನಿಯರನ್ನು ಬೇರೆಡೆಗೆ ಶಿಫ್ಟ್‌ ಮಾಡುವ ಕುರಿತು ಮಕ್ಕಳ ಹಕ್ಕು ಆಯೋಗ ಚಿಂತಿಸಿದೆ.

ಸ್ವಾಮೀಜಿ ಬಂಧನದ ಬೆನ್ನಲ್ಲೆ ಮಠದ ವಿದ್ಯಾರ್ಥಿನಿಯರ ಭವಿಷ್ಯದತ್ತ ಮಕ್ಕಳ ಆಯೋಗ ಚಿಂತನೆ ನಡೆಸಿದೆ. ಸದ್ಯಕ್ಕೆ ವಿದ್ಯಾರ್ಥಿನಿಯರನ್ನು ಮೊರಾರ್ಜಿ ದೇಸಾಯಿ ಹಾಸ್ಟೆಲ್‌ಗೆ ಶಿಫ್ಟ್‌ ಮಾಡುವ ನಿರ್ಧಾರ ಕೈಗೊಂಡಿದೆ. ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ʼಪಬ್ಲಿಕ್‌ ಟಿವಿʼಗೆ ಆಯೋಗ ತಿಳಿಸಿದೆ. ಇದನ್ನೂ ಓದಿ: ಸಾಯಿಬಾಬಾನ 3ನೇ ಅವತಾರ ಅಂತ ಜನರಿಗೆ ವಂಚನೆ – ನಕಲಿ ಬಾಬಾ ವಿರುದ್ಧ FIR

125 ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಇದ್ದರು. ಅವರ ಪೈಕಿ ಸುಮಾರು ಅರ್ಧಕ್ಕರ್ಧ ವಿದ್ಯಾರ್ಥಿನಿಯರು ಹಬ್ಬಕ್ಕೆಂದು ಊರಿಗೆ ಹೋಗಿದ್ದು, ವಾಪಸ್ಸಾಗಿಲ್ಲ. ಹೀಗಾಗಿ ಅವರು ಬಂದ ಬಳಿಕ ಎಲ್ಲಾ ವಿದ್ಯಾರ್ಥಿನಿಯರನ್ನು ಆಯಾಯಾ ಜಿಲ್ಲೆಯ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ಗೆ ಶಿಫ್ಟ್ ಮಾಡಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ.

ವಿವಿಧ ಜಿಲ್ಲೆಗಳಿಂದ ಮಕ್ಕಳು ಬಂದಿದ್ದಾರೆ. ಆದ್ದರಿಂದ ಆಯಾಯ ಜಿಲ್ಲೆಯ ಮಕ್ಕಳಿಗೆ ಅವರವರ ಜಿಲ್ಲೆಯಲ್ಲಿಯೇ ವ್ಯವಸ್ಥೆ ಮಾಡಲಾಗುವುದು. ಮಕ್ಕಳಿಗೆ ಆತಂಕದ ವಾತಾವರಣ ಇರಬಾರದು ಎನ್ನುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಮುರುಘಾ ಶ್ರೀಗಳ ಪ್ರಕರಣದಲ್ಲಿ ರಾಜಕೀಯ ಪಕ್ಷಗಳ ಎಚ್ಚರಿಕೆಯ ಹೆಜ್ಜೆ

Live Tv

Leave a Reply

Your email address will not be published.

Back to top button