ಬೆಂಗಳೂರು: ಕರ್ನಾಟಕ ಕ್ರಿಕೆಟ್‌ನಲ್ಲಿ (Karnataka Cricket) 13 ವರ್ಷದ ಬೆಂಗಳೂರಿನ ಬಾಲಕ 2023-24ರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಪಂದ್ಯಗಳಲ್ಲಿ 1,400ಕ್ಕೂ ಹೆಚ್ಚು ರನ್ ಸಿಡಿಸಿ ಸುದ್ದಿಯಾಗಿದ್ದಾನೆ.
ರಾಜಾಜಿನಗರ ನಿತೀಶ್ ಆರ್ಯ (Nitish Arya) 16 ವರ್ಷದೊಳಗಿನವರ ಟೂರ್ನಿಯಲ್ಲಿ 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 565 ರನ್ ಗಳಿಸಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಹಿರಿಯರ ಕ್ರಿಕೆಟ್‌ನಲ್ಲಿ 13ನೇ ವಯಸ್ಸಿನಲ್ಲೇ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದು ನಿಜಕ್ಕೂ ದೊಡ್ಡ ಸಾಧನೆ. ಇದನ್ನೂ ಓದಿ: ಟಿ20ಯಲ್ಲಿ ರವಿ ಬಿಷ್ಣೋಯ್‌ಗೆ ಅಗ್ರ ಸ್ಥಾನ – ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಕಮಾಲ್
Advertisement
Advertisement
ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ನಿತೀಶ್ ರಾಜಾಜಿನಗರ ಕ್ರಿಕೆಟರ್ಸ್ ಮತ್ತು ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ (ಬಸವೇಶ್ವರನಗರ) ಪರವಾಗಿ ಆಡುತ್ತಾರೆ. 7ನೇ ತರಗತಿ ಓದುತ್ತಿರುವ ನಿತೀಶ್ ಮೂರು ವರ್ಷ ಇರುವಾಗಲೇ ಕ್ರಿಕೆಟ್ ಆಡಲು ಆರಂಭಿಸಿದರು. ಈಗ ಅವರು ವಿಕ್ಟರಿ ಕ್ರಿಕೆಟ್ ಕ್ಲಬ್‌ಗಾಗಿ ಕೆಎಸ್‌ಸಿಎಯ 4ನೇ ಡಿವಿಷನ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕದೊಂದಿಗೆ ಅಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ.
Advertisement
ವಿರಾಟ್ ಕೊಹ್ಲಿಯ (Virat Kohli) ದೊಡ್ಡ ಅಭಿಮಾನಿಯಾದ 13 ವರ್ಷದ ನಿತೀಶ್ ಆರ್ಯ ಎಲ್ಲಾ ಮೂರು ಮಾದರಿಯಲ್ಲಿ ಟೀಂ ಇಂಡಿಯಾದ ಕ್ಯಾಪ್ ಧರಿಸುವ ಕನಸು ಕಾಣುತ್ತಿದ್ದಾರೆ. ವಯಸ್ಸು ಕಡಿಮೆ ಇದ್ದರೂ ಹಿರಿಯ ಕ್ರಿಕೆಟ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದನ್ನು ನೋಡಿ ರಾಜಾಜಿನಗರ ಕ್ರಿಕೆಟರ್ಸ್ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ತಂಡದ ಶಿವಮೊಗ್ಗ ಲಯನ್ಸ್ ಮಾಲೀಕ ಆರ್ ಕುಮಾರ್ ನಿತೀಶ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
Advertisement
ರಾಜಾಜಿನಗರ ಕ್ರಿಕೆಟಿಗರ ತರಬೇತುದಾರ ವಿನಯ್ ಕುಮಾರ್ ಎನ್‌ಪಿ ಮಾತನಾಡಿ, ನಿತೀಶ್ ತುಂಬಾ ಡೆಡಿಕೇಟೆಡ್ ಹುಡುಗ. ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ನೆಟ್ಸ್‌ನಲ್ಲಿ ತುಂಬಾ ಶ್ರಮಿಸುತ್ತಾರೆ ಎಂದು ಹೇಳಿದ್ದಾರೆ.
ನಿತೀಶ್ ಕ್ರಿಕೆಟ್ ಮಾತ್ರವಲ್ಲ ಅಧ್ಯಯನದಲ್ಲೂ ಮುಂದಿದ್ದಾರೆ. ಪರೀಕ್ಷೆಗಳಲ್ಲಿ 80% ರಿಂದ 90% ರಷ್ಟು ಅಂಕ ಗಳಿಸುತ್ತಿದ್ದಾರೆ.