– ನಮ್ಮಲ್ಲಿ `ಮೆಂಬರ್‌ಶಿಪ್’ಗಿಂತ `ರಿಲೇಷನ್‌ಶಿಪ್’ಗೆ ಮಹತ್ವ; ಆದರ್ಶ ಬದಲಾಗದು ಎಂದ ಪ್ರಧಾನಿ
ನವದೆಹಲಿ: ನಿತಿನ್ ನಬಿನ್ (Nitin Nabin) ನನ್ನ ಬಾಸ್, ನಾನು ಬಿಜೆಪಿಯ ಕಾರ್ಯಕರ್ತ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದರು.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ (BJP President) ಅಧಿಕಾರ ವಹಿಸಿಕೊಂಡ ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ ಪ್ರಧಾನಿ, ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್ ಎಂದರು. ಇದನ್ನೂ ಓದಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ

ಮುಂದುವರಿದು.. ಬಿಜೆಪಿ (BJP) ಹೊಸಬರಿಗೆ ವೇದಿಕೆ ಒದಗಿಸುತ್ತದೆ. ಬಿಜೆಪಿ ಅಧ್ಯಕ್ಷರ ಜವಾಬ್ದಾರಿ ಕೇವಲ ಪಕ್ಷಕ್ಕೆ ಸೀಮಿತವಾಗಿಲ್ಲ, ಎನ್‌ಡಿಎ ಒಕ್ಕೂಟದಲ್ಲಿ ಸಮನ್ವಯ ಸಾಧಿಸುವುದೂ ಅವರ ಕರ್ತವ್ಯವಾಗಿದೆ. ಪಕ್ಷದ ವಿಚಾರ ಬಂದ್ರೆ ನಿತಿನ್ ನವೀನ್ ಅವರೇ ಬಾಸ್. ನಾನು ಪಕ್ಷದ ಕಾರ್ಯಕರ್ತ. ನವೀನ್ ಅವರಿಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸುತ್ತಾರೆಂದು ನಾನು ಭಾವಿಸುತ್ತೇನೆ ಎಂದು ಹೊಗಳಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರಿಕೆಟ್ ಅಂಗಳದಲ್ಲೇ IPL 2026 ಉದ್ಘಾಟನೆ?
दशकों तक हमारे आदिवासी समाज को सिर्फ वोट बैंक से जोड़कर देखा गया। लेकिन भाजपा की संवेदनशीलता, संस्कार और समानता की भावना ने आदिवासियों में भी सबसे पिछड़ी जनजातियों की पीड़ा तक को समझा और उनके कल्याण के लिए योजनाएं बनाईं। pic.twitter.com/prlWj2LEoL
— Narendra Modi (@narendramodi) January 20, 2026
ನಿತಿನ್ ಮಿಲೆನಿಯಲ್ ಜನರೇಷನ್‌ನವರು
ಇಂದಿನ ಯುವಕರ ಭಾಷೆಯಲ್ಲಿ ಹೇಳುವುದಾದ್ರೆ, ನಿತಿನ್ ಜಿ ಅವರು ಮಿಲೆನಿಯಲ್ ಜನರೇಷನ್‌ನವರು. ಅವರು ಭಾರತದಲ್ಲಿನ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆಗಳನ್ನ ಕಂಡ ಪೀಳಿಗೆಯವರು. ಬಾಲ್ಯದಲ್ಲಿ ರೇಡಿಯೊದಲ್ಲಿ ಮಾಹಿತಿ ಕೇಳಿ, ಈಗ ಎಐ ಬಳಸುವ ತಂತ್ರಜ್ಞಾನಕ್ಕೆ ಒಗ್ಗಿಕೊಂಡವರು. ನಿತಿನ್ ಜಿ ಅವರಲ್ಲಿ ಯುವಕರ ಉತ್ಸಾಹ ಮತ್ತು ಸಂಘಟನಾತ್ಮಕ ಕೆಲಸದ ಅನುಭವ ಎರಡೂ ಇದೆ. ಇದು ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಬಹಳ ಪ್ರಯೋಜನಕಾರಿ ಎಂದು ಮೋದಿ ಬಣ್ಣಿಸಿದ್ರು. ಇದನ್ನೂ ಓದಿ: ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಲೀಪರ್ ಬಸ್ ಅಪಘಾತ; ಓರ್ವ ಸಾವು, 11 ಮಂದಿಗೆ ಗಾಯ!
बीते 11 वर्षों की बात करें, तो भाजपा की यात्रा जन-विश्वास अर्जित करने की अद्भुत यात्रा रही है। पार्टी पर जनता-जनार्दन का भरोसा किस प्रकार सुदृढ़ हुआ है, यह हाल के विधानसभा चुनावों से लेकर स्थानीय निकाय चुनावों में भी देखने को मिला है। pic.twitter.com/yOhX0rOXcX
— Narendra Modi (@narendramodi) January 20, 2026
`ಮೆಂಬರ್‌ಶಿಪ್’ಗಿಂತ `ರಿಲೇಷನ್‌ಶಿಪ್’ಗೆ ಮಹತ್ವ
ಬಿಜೆಪಿ ಒಂದು ಸಂಸ್ಕೃತಿ, ಒಂದೇ ಕುಟುಂಬ. ಇಲ್ಲಿ, ನಾವು `ಮೆಂಬರ್‌ಶಿಪ್’ಗಿಂತ `ರಿಲೇಷನ್‌ಶಿಪ್’ ಮಹತ್ವ ಹೊಂದಿದ್ದೇವೆ. ಬಿಜೆಪಿ ಒಂದು ಸಂಪ್ರದಾಯವಾಗಿದ್ದು, ಇದು ಸ್ಥಾನದಿಂದಲ್ಲ, ಪ್ರಕ್ರಿಯೆಯಿಂದ ನಡೆಯುತ್ತದೆ. ನಮ್ಮ ಅಧ್ಯಕ್ಷರು ಬದಲಾಗುತ್ತಾರೆ, ಆದರೆ ನಮ್ಮ ಆದರ್ಶಗಳು ಬದಲಾಗುವುದಿಲ್ಲ. ನಾಯಕತ್ವ ಬದಲಾಗುತ್ತದೆ, ಆದರೆ ದಿಕ್ಕು ಒಂದೇ ಇರುತ್ತದೆ. ಬಿಜೆಪಿಯ ಆತ್ಮ ರಾಷ್ಟ್ರೀಯವಾದುದು, ಏಕೆಂದರೆ ನಮ್ಮ ಸಂಪರ್ಕ ಸ್ಥಳೀಯವಾಗಿದೆ. ನಮ್ಮ ಬೇರುಗಳು ಮಣ್ಣಿನಲ್ಲಿ ಆಳವಾಗಿವೆ ಎಂದು ಮೋದಿ ಹೇಳಿದರು.

