ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾನುವಾರ ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್‍ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಆದರೆ ಈ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲವೆಂದು ಗಡ್ಕರಿ ಅವರು ಸ್ಪಷ್ಟನೆ ಕೊಟ್ಟರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಕರಿ ಅವರು, ಎಂಎನ್‍ಎಸ್ ಮುಖ್ಯಸ್ಥರ ಕುಟುಂಬದೊಂದಿಗೆ ನಮ್ಮದು ಹಳೆಯ ಸಂಬಂಧವಿದೆ. ಈ ಹಿನ್ನೆಲೆ ಅವರ ಆಹ್ವಾನದ ಮೇರೆಗೆ ನಾವು ಮನೆಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ದೃಢಸಂಕಲ್ಪ, ಜಾಣ್ಮೆ, ತಾಳ್ಮೆ ಇವು ಯಶಸ್ಸಿನ ಸೂತ್ರಗಳು: ಆನಂದ್ ಮಹೀಂದ್ರಾ
ಇದು ರಾಜಕೀಯ ಸಭೆಯಲ್ಲ. ರಾಜ್ ಠಾಕ್ರೆ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ 30 ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದ್ದೇನೆ. ನಾನು ಅವರ ಹೊಸ ಮನೆಯನ್ನು ನೋಡಲು ಮತ್ತು ಅವರ ತಾಯಿಯ ಯೋಗಕ್ಷೇಮವನ್ನು ತಿಳಿದುಕೊಳ್ಳಲು ಬಂದಿದ್ದೇನೆ. ಇದು ಕುಟುಂಬ ಭೇಟಿಯೇ ಹೊರತು ರಾಜಕೀಯವಲ್ಲ ಎಂದು ಸ್ಪಷ್ಟಪಡಿಸಿದರು.
ಶನಿವಾರ ಠಾಕ್ರೆ ಅವರು, ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು. ನಾವು ಅವರು ಪ್ರಾರ್ಥನೆ ಮಾಡುವುದು ಬೇಡ ಎನ್ನುತ್ತಿಲ್ಲ. ಅವರ ಮನೆಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಿ. ಒಂದು ವೇಳೆ ಮಸೀದಿ ಮುಂದೆ ಧ್ವನಿವರ್ಧಕಗಳನ್ನು ಹಾಕಿದರೆ ಅಲ್ಲಿ ಹನುಮಾನ್ ಚಾಲೀಸಾ ನುಡಿಸಬೇಕು ಎಂದು ಎಚ್ಚರಿಕೆಯನ್ನು ಕೊಟ್ಟಿದ್ದರು. ಈ ಎಚ್ಚರಿಕೆ ಕೊಟ್ಟ ಮರುದಿನವೇ ಠಾಕ್ರೆ ಮನೆಗೆ ನಿತಿನ್ ಗಡ್ಕರಿ ಅವರು ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಮಸೀದಿ ಸಮೀಪ ಹನುಮಾನ್ ಚಾಲೀಸಾ ಹಾಕಿದ ಎಂಎನ್ಎಸ್