ಗಾಂಧಿನಗರ: ಹಣವಿಲ್ಲದೇ ಯಾವುದೇ ರಾಜಕೀಯ ಪಕ್ಷ ನಡೆಸುವುದು ಸುಲಭವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
2018ರಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿದ್ದ ಚುನಾವಣಾ ಬಾಂಡ್ (Electoral Bonds) ಅನ್ನು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ (Supreme Court) ರದ್ದು ಗೊಳಿಸಿತು. ಈ ಕುರಿತು ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಹಣ ನೀಡಿದ ವ್ಯಕ್ತಿಯ ಹೇಳಿಕೆ ಆಧರಿಸಿ ಕೇಜ್ರಿವಾಲ್ ಬಂಧನ – ಇಡಿ ವಿರುದ್ಧ ಆಪ್ ಆರೋಪ
Advertisement
Advertisement
ಅರುಣ್ ಜೇಟ್ಲಿ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತು. ನಾನು ಸಹ ಅದರ ಭಾಗವಾಗಿದ್ದೆ. ಸಂಪನ್ಮೂಲವಿಲ್ಲದೇ ಯಾವುದೇ ಪಕ್ಷ ಬದಕಲು ಸಾಧ್ಯವಿಲ್ಲ. ಕೆಲವು ದೇಶಗಳಲ್ಲಿ ಸರ್ಕಾರಗಳೇ ರಾಜಕೀಯ ಪಕ್ಷಗಳಿಗೆ ಹಣ ನೀಡುತ್ತವೆ. ಭಾರತದಲ್ಲಿ ಅಂತಹ ವ್ಯವಸ್ಥೆಯಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳಿಗೆ ಹಣಕಾಸು ಒದಗಿಸುವ ವ್ಯವಸ್ಥೆಗಾಗಿ ಚುನಾವಣಾ ಬಾಂಡ್ ಅನ್ನು ಪರಿಚಯಿಸಲಾಗಿತ್ತು. ಕಾರ್ಯಕ್ರಮಗಳಿಗೆ ಹಣ ಒದಗಿಸಲು ಪ್ರಾಯೋಜಕರ ಅಗತ್ಯವಿರುವಂತೆ, ರಾಜಕೀಯ ಪಕ್ಷಗಳಿಗೂ ತಮ್ಮ ವ್ಯವಹಾರಗಳನ್ನು ನಡೆಸಲು ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ.
Advertisement
Advertisement
ಮೊದಲು ನಾವು ವಾಸ್ತವವನ್ನು ನೋಡಬೇಕು. ಪಕ್ಷಗಳು ಚುನಾವಣೆಯಲ್ಲಿ ಹೇಗೆ ಹೋರಾಡಬೇಕು? ಚುನಾವಣೆಯಲ್ಲಿ ಪಾರದರ್ಶಕತೆ ತರೋದಕ್ಕಾಗಿಯೇ ನಾವು ಬಾಂಡ್‌ಗಳ ವ್ಯವಸ್ಥೆ ತಂದಿದ್ದೆವು. ಜಾರಿಗೆ ತರುವಾಗ ನಮ್ಮ ಉದ್ದೇಶ ಉತ್ತಮವಾಗಿತ್ತು. ಈಗಲಾದ್ರೂ ಎಲ್ಲಾ ಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಹೊಸ ದತ್ತಾಂಶ ರಿಲೀಸ್ – ಅತಿಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು?
ಆಯೋಗಕ್ಕೆ ಎಸ್‌ಬಿಐನಿಂದ ದಾಖಲೆ ಸಲ್ಲಿಕೆ:
ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಎರಡು ದಿನಗಳ ಹಿಂದೆಯಷ್ಟೇ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಇದು ಬಾಂಡ್ ಖರೀದಿಸಿದವರ ಹೆಸರು, ವಿವಿಧ ಬಗೆಯ ಬಾಂಡ್‌ಗಳ ನಿರ್ದಿಷ್ಟ ಸಂಖ್ಯೆ, ಬಾಂಡ್ ನಗದೀಕರಿಸಿದ ಪಕ್ಷ, ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆಗಳ ಕೊನೆಯ ನಾಲ್ಕು ಸಂಖ್ಯೆಯನ್ನು ತೋರಿಸುವ ಮಾಹಿತಿಗಳನ್ನು ಒಳಗೊಂಡಿದೆ.
ಎಸ್‌ಬಿಐ ಈಗ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿದೆ. ಸಂಪೂರ್ಣ ಖಾತೆ ಸಂಖ್ಯೆಗಳು, ಕೆವೈಸಿ ವಿವರ ಸೇರಿದಂತೆ ಯಾವುದೇ ಮಾಹಿತಿಯನ್ನು ರಹಸ್ಯವಾಗಿ ಇರಿಸಿಲ್ಲ ಎಂದು ಎಸ್‌ಬಿಐ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: Bengaluru Rural Lok Sabha 2024: ಡಿಕೆ ಬ್ರದರ್ಸ್ ಕಟ್ಟಿ ಹಾಕುತ್ತಾ ‘ಮೈತ್ರಿ’?
ಬ್ಯಾಂಕ್ ನೀಡಿರುವ ವಿವರಗಳನ್ನು ಚುನಾವಣಾ ಆಯೋಗವು ಶೀಘ್ರದಲ್ಲೇ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ನಿರೀಕ್ಷೆಯಿದೆ. ಎಸ್‌ಬಿಐ ಈ ಹಿಂದೆ ಚುನಾವಣಾ ಆಯೋಗಕ್ಕೆ ಎರಡು ಪಟ್ಟಿಗಳನ್ನು ನೀಡಿತ್ತು. ಅದನ್ನು ಚುನಾವಣಾ ಸಮಿತಿಯು ಮಾರ್ಚ್ 14 ರಂದು ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.