ಏಕತೆಯೇ ಭಾರತೀಯ ಸಂಸ್ಕೃತಿಯ ದೊಡ್ಡ ಶಕ್ತಿ: ನಿತಿನ್ ಗಡ್ಕರಿ

Public TV
1 Min Read
Nitin Gadkari Road

– ಎಲ್ಲಾ ಮತ, ಧರ್ಮ, ಸಮುದಾಯ ಗೌರವಿಸುವುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ

ನವದೆಹಲಿ: ಏಕತೆ ಎಂಬುದು ಭಾರತೀಯ ಸಂಸ್ಕೃತಿಯ ಬಹುದೊಡ್ಡ ಶಕ್ತಿಯಾಗಿದೆ. ಈ ಶಕ್ತಿ ದೇಶವನ್ನು ವಿಶ್ವ ಗುರುವನ್ನಾಗುವಂತೆ ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ರಾಷ್ಟ್ರೀಯ ಅಂತರ್ ಧರ್ಮೀಯ ಸಮ್ಮೇಳದಲ್ಲಿ ಕೋಮು ಸೌಹಾರ್ದತೆಗೆ ಜಾಗತಿಕ ಸವಾಲುಗಳು ಮತ್ತು ಭಾರತದ ಪಾತ್ರ ಕುರಿತು ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ನೈಜ ಜಾತ್ಯತೀತವಾಗಿದೆ. ಎಲ್ಲಾ ಮತ, ಧರ್ಮಗಳು, ಸಮುದಾಯ, ಸಿದ್ಧಾಂತಗಳನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ವಾಗಿದ್ದು, ಈ ಸಂಸ್ಕೃತಿ ಯಾವುದೋ ಒಂದು ಧರ್ಮದೊಂದಿಗೆ ಸಂಬಂಧವನ್ನು ಹೊಂದಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

Nitin Gadkari

ಏಕತೆ ಎನ್ನುವುದು ಭಾರತೀಯ ಸಂಸ್ಕೃತಿಯ ಬಹುದೊಡ್ಡ ಶಕ್ತಿಯಾಗಿದೆ. ನಮ್ಮ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಸ್ವಾಮಿ ವಿವೇಕಾನಂದರು ಆ ಕಾಲದಲ್ಲೇ ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ

 

ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ಮನುಷ್ಯ ಜೀವನ ವೈವಿಧ್ಯವನ್ನು ಬಯಸುತ್ತದೆ. ಆದರೆ ನಮ್ಮಲ್ಲಿರುವ ತಿಳಿವಳಿಕೆಯ ಕೊರತೆ ಹಾಗೂ ಒತ್ತಡದಿಂದಾಗಿ ವೈವಿಧ್ಯವನ್ನು ದ್ವೇಷಿಸಲಾಗುತ್ತಿದೆ. ಇಲ್ಲಿ ಎಲ್ಲ ಸಮುದಾಯಗಳು ಪ್ರಮುಖವಾದವು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಪರಸ್ಪರ ಗೌರವಿಸುತ್ತಾ, ಒಂದಾಗಿ ಬದುಕುವುದು ಅಗತ್ಯವಾಗಿದೆ ಎಂದು ಹೇಳಿದರು.

Share This Article