ಬೆಂಗಳೂರು: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಫೆಬ್ರವರಿ 5ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ನಿತ್ಯಾನಂದ ಆಧ್ಯಾತ್ಮದ ಹೆಸರಿನಲ್ಲಿ ಚಾತುರ್ಮಾಸ ಅಂತ ಊರು ಬಿಟ್ಟಿದ್ದಾನೆ. ಹೀಗೆ ಊರು ಬಿಟ್ಟವನಿಗೆ ಪೊಲೀಸರು ರಕ್ಷಣೆಯನ್ನು ನೀಡುವ ಹಾಗಿಲ್ಲ. ಹೀಗಿರುವಾಗ ಕಾನೂನಿನ ರಕ್ಷಣೆಯನ್ನು ಕೊಡಬಾರದು, ಕೂಡಲೇ ನಿತ್ಯಾನಂದನ ಜಾಮೀನು ವಜಾಗೊಳಿಸುವಂತೆ ಲೆನಿನ್ ಪರ ವಕೀಲರು ಇಂದು ಹೈ ಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ನಾನು ಪರಮಶಿವ- ನಿತ್ಯಾನಂದನ ವಿಡಿಯೋ ವೈರಲ್
Advertisement
Advertisement
ನಿತ್ಯಾನಂದ ಇಲ್ಲದೇ ಇರುವ ಕಾರಣ ಆತನ ಪ್ರಕರಣಕ್ಕೇನು ತೊಂದರೆ ಆಗಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿ ಅದರ ಪಾಡಿಗೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಪ್ರಕರಣದ ದೋಷಾರೋಪ ಪಟ್ಟಿಯೂ ತಯಾರಾಗಿದ್ದು, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ನಿತ್ಯಾನಂದನ ಅವಶ್ಯಕತೆಯಿಲ್ಲ. ಪದೇ ಪದೇ ಕೋರ್ಟಿನಲ್ಲಿ ಆತ ಇರೋದು ಬೇಕಾಗಿಲ್ಲ ಎಂದು ನಿತ್ಯಾನಂದ ಪರ ವಕೀಲರು ವಾದ ಮಂಡಿಸಿದರು.
Advertisement
Advertisement
ಆದರೆ ನಿತ್ಯಾನಂದನ ಪಾಸ್‍ಪೋರ್ಟ್ ಕಾಲಾವಧಿ ಮುಕ್ತಾಯ ಆಗಿದ್ದರೂ ಕೂಡ ಆತ ದೇಶ ಬಿಟ್ಟು ಹೋಗಿದ್ದಾನೆ. ಪೊಲೀಸರು ಆ ಮಾಹಿತಿಯನ್ನು ಅಧಿಕೃತವಾಗಿ ಎಲ್ಲಿಯೂ ಹೇಳುತ್ತಿಲ್ಲ. ಪಾಸ್‍ಪೋಟ್ ಇಲ್ಲದೇ ದೇಶ ಬಿಟ್ಟು ಹೋಗಿರೋದು ದೇಶದ್ರೋಹ. ಅತ್ಯಾಚಾರಿ ಓರ್ವ ದೇಶ ಬಿಟ್ಟಿರೋದೇ ಅಪರಾಧ. ಹೀಗಾಗಿ ನಿತ್ಯಾನಂದನ ಜಾಮೀನು ರದ್ದು ಮಾಡುವಂತೆ ವಕೀಲರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಫೆಬ್ರವರಿ 5ಕ್ಕೆ ಈ ಸಂಬಂಧ ಆದೇಶ ಕಾಯ್ದಿರಿಸಿದೆ.