ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ನಿರ್ಮಲಾನಂದ ಶ್ರೀ ಚಾಲನೆ

Public TV
2 Min Read
EXPO

ಬೆಂಗಳೂರು: ಎರಡು ದಿನಗಳ ಕಾಲ ವಿಜಯನಗರದ ಎಂಸಿ ಲೇಔಟ್ ನಲ್ಲಿರೋ ಬಾಲಗಂಗಾಧರನಾಥ ಕ್ರೀಡಾಂಗಣದಲ್ಲಿ ಪಬ್ಲಿಕ್ ಟಿವಿ ಆಯೋಜಿಸಿರುವ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಇಂದು ಚಾಲನೆ ನೀಡಿದ್ದಾರೆ.

ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಒಂದು ದೇಶಕ್ಕೆ ಮಾನವ ಸಂಪನ್ಮೂಲವೇ ಬಹುದೊಡ್ಡ ಸಂಪನ್ಮೂಲವಾಗಿರುತ್ತದೆ. ಜ್ಞಾನವಂತರು ಇರುವಂತಹ ದೇಶ, ಮನೆ ಅಥವಾ ಸಮಾಜ ಇದ್ದು, ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಆ ದೇಶದಲ್ಲಿರುವಂತಹ ಜ್ಞಾನವಂತ ಮಕ್ಕಳು ಪ್ರಜೆಗಳು ಆ ದೇಶಕ್ಕೆ ಆಸ್ತಿಯಾಗುತ್ತಾರೆ. ಇಂತಹ ಜ್ಞಾನವನ್ನು ಹೊರಗೆ ತರುವಂತಹ ಮತ್ತು ಅವರವರಿಗೆ ಅವರವರ ಶಕ್ತಿಯ ದರ್ಶನವನ್ನು ಮಾಡಿಕೊಡುವಂತಹ ವ್ಯವಸ್ಥೆ ಅಂದರೆ ಅದು ಎಜುಕೇಶನ್ ಸಿಸ್ಟಮ್ ಆಗಿರುತ್ತದೆ ಎಂದು ಹೇಳಿದರು.

EXPO 1

ಮಕ್ಕಳಿಗೆ ಅತ್ಯತ್ತಮ ಶಿಕ್ಷಣ ಕೊಡಿಸುವ ಹಲವಾರು ಶಾಲೆಗಳು ನಮ್ಮ ಪಟ್ಟಣದಲ್ಲಿ ಬರುತ್ತಿರುತ್ತದೆ. ಇಂತಹ ಶಾಲೆಗಳನ್ನು ಗುರುತಿಸಿ, ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಗೆ ಸೇರಿಸುವುದರಿಂದ ಅವರು ವಿಶ್ವದ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಶಾಲೆಗಳಲ್ಲಿ ಆಧುನಿಕ ವಿದ್ಯೆ ಖಂಡಿತಾ ಬೇಕು. ಹೀಗಾಗಿ ಉತ್ತಮ ಶಾಲೆಗಳನ್ನು ಇಲ್ಲಿಗೆ ಕರೆಸಿ, ಅವರ ಪರಿಚಯವನ್ನು ನಾಗರಿಕರಿಗೆ ಮಾಡಿಸಿ, ನಿಮ್ಮ ಆಯ್ಕೆ ಯಾವ ಶಾಲೆ ಎಂಬುದನ್ನು ತಿಳಿದುಕೊಳ್ಳಿ ಎಂದು ಪಬ್ಲಿಕ್ ಟಿವಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಒಳ್ಳೆಯ ಪ್ರಯತ್ನವಾಗಿದೆ ಎಂದು ಅವರು ಹಾರೈಸಿದರು.

Public TV Dreams School Expo 768x562 1

ಕಾರ್ಯಕ್ರಮದಲ್ಲಿ ಸಚಿವರಾದ ವಿ ಸೋಮಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್, ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳು ಪೋಷಕರಿಗೆ ಒಂದೇ ಸೂರಿನಲ್ಲಿ ಸುಲಭವಾಗಿ ಸಿಗಲೆಂದು ಇಂದು ಮತ್ತು ನಾಳೆ ಎಕ್ಸ್ ಪೋವನ್ನು ಆಯೋಜಿಸಲಾಗಿದೆ. ಪ್ರಿಸ್ಕೂಲ್, ಇಂಟರ್ ನ್ಯಾಷನಲ್ ಮತ್ತು ರೆಸಿಡೆನ್ಶಿಯಲ್ ಸ್ಕೂಲ್ ಬಗ್ಗೆ ಸ್ಪಷ್ಟವಾದ ಮಾಹಿತಿ ಡ್ರೀಮ್ಸ್ ಸ್ಕೂಲ್‍ನಲ್ಲಿ ಸಿಗಲಿದೆ.

EXPO 3

ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಾತ್ಮಕ ಶಿಕ್ಷಣ, ಪಾಠ ಮತ್ತು ಪಠ್ಯೇತರ ಚಟುವಟಿಕೆಯ ಆಧಾರದ ಮೇಲೆ ಶಾಲೆಗಳನ್ನು ವಿಂಗಡಿಸಿದ್ದು ಮಗುವನ್ನು ಎಲ್ಲಿ ಸೇರಿಸಿದರೆ ಭವಿಷ್ಯ ಉಜ್ವಲವಾಗಬಹುದು ಎಂಬ ಪೋಷಕರ ಪ್ರಶ್ನೆಗೆ ಎಕ್ಸ್ ಪೋದಲ್ಲಿ ಸುಲಭವಾಗಿ ಉತ್ತರ ಸಿಗಲಿದೆ. ಉಚಿತ ಪ್ರವೇಶದ ಕಾರ್ಯಕ್ರಮ ಇದಾಗಿದ್ದು ಪೋಷಕರು ಆಗಮಿಸಿ ಶಾಲೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಏನು ಇರುತ್ತೆ?
– ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು
– ಮಾಹಿತಿಪೂರ್ಣ ಸಂವಾದಗಳು
– ಡ್ರಾಯಿಂಗ್ ಸ್ಪರ್ಧೆ
– ಕ್ವಿಜ್ ಸ್ಪರ್ಧೆ
– ಮ್ಯಾಜಿಕ್ ಶೋ
– ಸ್ಪರ್ಧಿಗಳಿಗೆ ಉಚಿತ ಗಿಫ್ಟ್
– ಸ್ಥಳದಲ್ಲೇ ಅಡ್ಮಿಶನ್ ವ್ಯವಸ್ಥೆ

 

Share This Article
Leave a Comment

Leave a Reply

Your email address will not be published. Required fields are marked *