ರಿಯಲ್ ಸ್ಟಾರ್ ಉಪೇಂದ್ರ (Upendra) ಅಣ್ಣನ ಮಗ ನಿರಂಜನ್ ಸುಧೀಂದ್ರಗೆ (Niranjan Sudhendra) ಅರ್ಜುನ್ ಸರ್ಜಾ (Arjun Sarja) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಸೀತಾ ಪಯಣ’ ಎಂಬ ಕ್ಯಾಚಿ ಟೈಟಲ್ ಕೂಡ ಇಡಲಾಗಿದೆ. ಇದೀಗ ಈ ಸಿನಿಮಾದ ನಿರಂಜನ್ ಪಾತ್ರದ ಲುಕ್ ಅನ್ನು ಅನಾವರಣ ಮಾಡಲಾಗಿದೆ.
‘ಸೀತಾ ಪಯಣ’ (Seetha Payana) ಚಿತ್ರದಲ್ಲಿ ನಿರಂಜನ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅಭಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅವರ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಇನ್ನೂ ಐಶ್ವರ್ಯಾ ಸರ್ಜಾ ಮತ್ತು ನಿರಂಜನ್ ಜೋಡಿಯಾಗಿ ‘ಸೀತಾ ಪಯಣ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರದ ಟೈಟಲ್ ನೋಡಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದೊಂದು ಲವ್ ಸ್ಟೋರಿ ಕುರಿತಾದ ಸಿನಿಮಾ ಅನ್ನೋದು ಖಾತ್ರಿಯಾಗಿದೆ.
View this post on Instagram
ಇನ್ನೂ ‘ಪ್ರೇಮ ಬರಹ’ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಡೈರೆಕ್ಷನ್ ಮಾಡಿರುವ ಅರ್ಜುನ್ ಸರ್ಜಾ ಈ ಬಾರಿ ವಿಭಿನ್ನವಾಗಿರುವ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ನಿರಂಜನ್ ಸುಧೀಂದ್ರ, ಪುತ್ರಿ ಐಶ್ವರ್ಯಾ ಸರ್ಜಾ ಈ ಇಬ್ಬರನ್ನು ಜೋಡಿಯಾಗಿ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ತಿರೋದ್ರಿಂದ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.
ಅಂದಹಾಗೆ, ನಿರಂಜನ್ ಈಗಾಗಲೇ ಸೆಕೆಂಡ್ ಹಾಫ್, ನಮ್ಮ ಹುಡುಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸೂಪರ್ ಸ್ಟಾರ್, ಹಂಟರ್, ಸೀತಾ ಪಯಣ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ.