ಉಡುಪಿ/ಬೆಂಗಳೂರು: 2018ರಲ್ಲಿ ಕಾಂಗ್ರೆಸ್ (Congress) ಕರೆ ನೀಡಿದ್ದ ಭಾರತ್ ಬಂದ್ (Bharat Bandh) ವಿರೋಧಿಸಿ ಚೈತ್ರಾ ಕುಂದಾಪುರ (Chaitra Kundapura) ಭಾರೀ ಸದ್ದು ಮಾಡಿದ್ರು. ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಗಮನ ಸೆಳೆದಿತ್ತು.
The grit & dare this young girl has shown in demonstrating the trust & faith she has in our @PMOIndia @narendramodi is noteworthy. In other places too many citizens have come out today to condemn #BharatBandh. Thanks to all those who have so openly rejected @INCIndia’s hypocrisy. https://t.co/Fe5iGCUUN0
— Nirmala Sitharaman (@nsitharaman) September 10, 2018
ಡೇರಿಂಗ್ ಗರ್ಲ್ ಎಂದು ಟ್ವೀಟಿಸಿ ಬೆನ್ನುತಟ್ಟಿದ್ರು. ಇದನ್ನೇ ಚೈತ್ರಾ ತಮ್ಮ ಮೈಲೇಜ್‍ಗೆ ಬಳಸಿಕೊಂಡಿದ್ರು. ತಮಗೆ ಕೇಂದ್ರದ ಲಿಂಕ್ ಇದೆ ಎಂದು ಬಿಂಬಿಸಿಕೊಂಡಿದ್ರು. ಮುಂದೆ ನಾನೇ ಬೈಂದೂರು ಎಂಎಲ್‍ಎ ಆಗ್ತೀನಿ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಆಗ್ತೀನಿ ಎಂದು ಹೇಳ್ಕೊಂಡು ಓಡಾಡ್ತಿದ್ರು.
ಗೋವಿಂದ ಪೂಜಾರಿಗೂ ಇದೇ ಕತೆಯನ್ನು ಹೇಳಿ ಚೈತ್ರಾ ವಂಚಿಸಿದ್ರು ಎಂಬ ವಿಚಾರ ಬಯಲಾಗಿದೆ. ಈ ವಂಚನೆ ಪುರಾಣ ಬಯಲಾದ ಬೆನ್ನಲ್ಲೇ ಆರೋಪಿ ಚೈತ್ರಾರಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳತೊಡಗಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ. ಇದನ್ನೂ ಓದಿ: EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!
ಬಿಜೆಪಿಯಲ್ಲಿ ಟಿಕೆಟ್ ಸೇಲ್‍ಗಿಲ್ಲ ಎನ್ನುವುದು ಇದ್ರಿಂದ ಗೊತ್ತಾಗ್ತಿದೆ ಎಂದು ಸಿಟಿ ರವಿ ಹೇಳ್ಕೊಂಡಿದ್ದಾರೆ. ನಮ್ಮ ಪಕ್ಷದ ಒಳಗೆ ಇದಕ್ಕೆಲ್ಲ ಅವಕಾಶ ಇಲ್ಲ ಎಂದು ಅಶ್ವಥ್‍ನಾರಾಯಣ್ ಹೇಳಿಕೆ ನೀಡಿದ್ದಾರೆ.
Web Stories