ಬೆಂಗಳೂರು: ಕೇರಳದಲ್ಲಿ 12 ಜನರ ಸಾವಿಗೆ ಕಾರಣವಾದ ನಿಪಾ ವೈರಾಣು ತಡೆಗಟ್ಟುವ ಮಾತ್ರೆಗಳು ಕೊನೆಗೂ ಮಲೇಷ್ಯಾದಿಂದ ಕೇರಳವನ್ನು ತಲುಪಿದೆ. ರಿಬಾ ವೈರಿನ್ ಎಂಬ ಈ ಟ್ಯಾಬ್ಲೆಟ್ ಓವರ್ ಡೋಸ್ ಆದರೆ ರೋಗಿಗೆ ತೀರಾ ಅಪಾಯಕಾರಿ ಎಂದು ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ. ಟ್ಯಾಬ್ಲೆಟ್ ಕೈಗೆ ಸಿಕ್ತು ಅಂತಾ ಈ ಟ್ಯಾಬ್ಲೆಟನ್ನು ಬೇಕಾಬಿಟ್ಟಿ ಸೇವಿಸುವಂತಿಲ್ಲ. ಕಾರಣ ಇದು ಓವರ್ ಡೋಸ್ ಆದ್ರೆ ಕಿಡ್ನಿಗಳು ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಜ್ಞ ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ.
ಮೊದಲ ಹಂತದಲ್ಲಿ ಬುಧವಾರ 2 ಸಾವಿರ ಟ್ಯಾಬ್ಲೆಟ್ ಕೇರಳದ ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ತಲುಪಿದೆ. ಇಂದು ಮತ್ತೆ 8 ಸಾವಿರ ಟ್ಯಾಬ್ಲೆಟ್ ತಲುಪಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಬಂದಿರುವ ಟ್ಯಾಬ್ಲೆಟ್ ಗಳ ಪ್ರಾಯೋಗಿಕ ಪರೀಕ್ಷೆ ಮಾಡಿದ ಬಳಿಕವಷ್ಟೇ ರೋಗಿಗಳಿಗೆ ನೀಡಲು ನಿರ್ಧರಿಸಲಾಗಿದೆ. ದೆಹಲಿಯ ಏಮ್ಸ್ ವೈದ್ಯರ ನಿರ್ದೇಶನದಂತೆ ಟ್ಯಾಬ್ಲೆಟ್ ವಿತರಣೆ ಆರಂಭವಾಗಲಿದೆ. ನಿಪಾ ವೈರಾಣುವನ್ನು ಹತೋಟಿಗೆ ತರಲು ರಿಬಾವೈರಿನ್ ಗೆ ಮಾತ್ರ ಸಾಧ್ಯ. ಹೀಗಾಗಿ ನಾವು ಮಲೇಷ್ಯಾದಿಂದ ಟ್ಯಾಬ್ಲೆಟ್ ತರಿಸಿದ್ದೇವೆ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಇದನ್ನೂ ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!
Advertisement
ಈ ನಡುವೆ ಕೇರಳದಲ್ಲಿ ನಿಪಾ ವೈರಾಣು ನಿಯಂತ್ರಣದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕೇರಳದಲ್ಲಿ ನಿಪಾ ವೈರಾಣು ಒಂದೇ ಕಡೆ ಕಾಣಿಸಿದೆ. ಇಲ್ಲಿ ವೈರಾಣು ನಿಯಂತ್ರಣದಲ್ಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ನಿರ್ದೇಶಕರಾದ ಪ್ರೀತಿ ಸುಧನ್ ಹೇಳಿದ್ದಾರೆ. ನಿಪಾ ವೈರಸ್ ಕಾಣಿಸಿದ ಪ್ರದೇಶದಲ್ಲಿದ್ದ 60 ಜನರಿಂದ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ವೈರಾಲಜಿ ಸಂಶೋಧನಾ ಸಂಸ್ಥೆಗೆ ಕಳಿಸಿದ್ದೇವೆ ಎಂದು ಹೇಳಿದ್ದಾರೆ. ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 9 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ರೋಗ ಹರಡದಂತೆ ಹಾಗೂ ರೋಗಿಗಳ ಚಿಕಿತ್ಸೆಗಾಗಿ ಕೇರಳ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಧ್ಯವಾದಷ್ಟು ಕೇರಳದ ಕೋಯಿಕ್ಕೋಡ್, ಮಲಪ್ಪುರಂ, ವಯನಾಡ್, ಕಣ್ಣೂರು ಜಿಲ್ಲೆಗಳಿಗೆ ಸಂಚರಿಸುವಾಗ ಎಚ್ಚರಿಕೆಯಿಂದಿರಿ ಎಂದು ಸರ್ಕಾರ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ
Advertisement
ಇದನ್ನೂ ಓದಿ: ‘ಬಾವಲಿ ಜ್ವರ’ಕ್ಕೆ ಕೇರಳದಲ್ಲಿ 10 ಸಾವು – ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ?