ಚಂಡೀಗಢ: ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಟ್ರಕ್ ಹರಿದು 9 ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಂಜಾಬ್‍ನ ಬತಿಂಡಾ ಜಿಲ್ಲೆಯಲ್ಲಿ ನಡೆದಿದೆ.
ದಟ್ಟವಾದ ಮಂಜು ಕವಿದಿದ್ದರಿಂದ ಟ್ರಕ್‍ನ ಚಾಲಕನಿಗೆ ರಸ್ತೆ ಬದಿಯಲ್ಲಿ ನಿಂತಿದ್ದ 16 ವಿದ್ಯಾರ್ಥಿಗಳು ಕಾಣಲಿಲ್ಲ. ಇದರಿಂದಾಗಿ ಏಕಾಏಕಿ ವಿದ್ಯಾರ್ಥಿಗಳ ಮೇಲೆ ಹರಿಸಿದ್ದಾನೆ. ಪರಿಣಾಮ 9 ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತ ಬಾತಿಂಡ-ಬರ್ನಾಲಾ ಹೆದ್ದಾರಿಯ ಬಚ್ಚೊ ಮಂಡಿ ಟೌನ್‍ನಲ್ಲಿ ಸಂಭವಿಸಿದೆ.
Advertisement
Advertisement
ಅಪಘಾತಕ್ಕೂ ಮುನ್ನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಹಾಗೂ ಮಿನಿ ಬಸ್ ನಡುವೆ ದಟ್ಟ ಮಂಜಿನ ಕಾರಣದಿಂದ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿತ್ತು. ಇದರಿಂದ ಬೇರೊಂದು ಬಸ್‍ಗೆ ಹೋಗಲು ಬಸ್‍ನಿಂದ ಕೆಳಗಿದ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಹಿಂದೆಯಿಂದ ಬಂದ ಟ್ರಕ್ ವಿದ್ಯಾರ್ಥಿಗಳ ಮೇಲೆ ಹರಿದಿದೆ. ಇನ್ನು ಅಪಘಾತದಲ್ಲಿ 7 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಅಪಘಾತ ನಡೆದ ಸಮಯದಲ್ಲಿ ದಟ್ಟ ಮಂಜು ಇದ್ದ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಮಾಡಲು ಅಡ್ಡಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಇದನ್ನು ಓದಿ: ಒಂದರ ನಂತರ ಒಂದರಂತೆ ಬರೋಬ್ಬರಿ 13 ವಾಹನಗಳ ಪರಸ್ಪರ ಡಿಕ್ಕಿ