ಚಿಕ್ಕಮಗಳೂರು: ನಿಗಮಕ್ಕೆ ಸರಬರಾಜಾಗುತ್ತಿದ್ದ ಹಾಲಿನಲ್ಲಿ ವಿಷಪೂರಿತ ವಸ್ತುಗಳನ್ನು ಕಲಬೆರಕೆ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಅಧಿಕಾರಿಗಳು ಹಾಗೂ ಪೊಲೀಸರ ತಂಡ ಯಶಸ್ವಿಯಾಗಿದೆ.
ಹಾಸನ ಹಾಲು ಒಕ್ಕೂಟಕ್ಕೆ ಸರಬರಾಜಾಗುತ್ತಿರುವ ಹಾಲಿಗೆ ವಿಷಕಾರ ಪದಾರ್ಥಗಳನ್ನು ಮಿಶ್ರಣಮಾಡಲಾಗುತ್ತಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬರು ಮಾರ್ಚ್ 20 ರಂದು ಹಾಸನ ಕೆಎಂಎಫ್ ಘಟಕಕ್ಕೆ ಪತ್ರ ಬರೆದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿ, ಜಿಲ್ಲೆಯಲ್ಲಿನ ಸುಮಾರು 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಬಂಧಿತ ಆರೋಪಿಗಳು ಹಾಲಿನ ಕ್ಯಾನ್ ಸಾಗಾಣೆ ಮಾಡುವ ವಾಹನಗಳಲ್ಲೇ ಮಿಕ್ಸಿಂಗ್ ಮಾಡುತ್ತಿದ್ದರು. ಹಾಸನ, ಸಕಲೇಶಪುರ, ಚಿಕ್ಕಮಗಳೂರು ಹಾಗೂ ಬೀರೂರು ಘಟಕಗಳಿಂದ ಜಾಲಕ್ಕೆ ಸಾಥ್ ನೀಡಲಾಗುತಿತ್ತು. ಅಷ್ಟೇ ಅಲ್ಲದೇ ಮಾಚೇನಹಳ್ಳಿಯಲ್ಲೂ ಸಹ ಕಲಬೆರಕೆ ಜಾಲ ನಡೆಯುತಿತ್ತು ಎನ್ನುವ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
Advertisement
ಈ ದಂಧೆಗೆ ಕೆಎಂಎಫ್ ಅಧಿಕಾರಿಗಳೇ ಬೆಂಬಲ ನೀಡುತ್ತಿದ್ದರಿಂದ ತನಿಖೆ ವಿಳಂಬಗೊಂಡಿತ್ತು. ಖುದ್ದು ಕೆಎಂಎಫ್‍ನ ಅಧಿಕಾರಿ ಸೌಮ್ಯರವರು ಮರು ತನಿಖೆಗೆ ಆದೇಶ ನೀಡಿ, ಚುರುಕುಗೊಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತನಿಖೆ ಮುಂದುವರಿಸಿದ್ದು, ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=KDooRbDdUmA