ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಪ್ರಕಟಣೆ – ಕರಾವಳಿಗರ ಮನಗೆದ್ದ ಪೈಲಟ್

Public TV
2 Min Read
INDIGO

ಮುಂಬೈ: ಕರಾವಳಿಯಲ್ಲಿ ಮನೆಮಾತಾಗಿರುವ ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಇದೀಗ ಈ ತುಳು ಭಾಷೆ ವಿಮಾನದಲ್ಲಿ ಮಾರ್ದನಿಸಿದೆ. ಅದೂ ಕೂಡ ವಿಮಾನದ ಪೈಲಟ್ ಬಾಯಲ್ಲಿ. ಇದೀಗ ಪೈಲಟ್‍ನ ತುಳು ಪ್ರಕಟಣೆಯ ವೀಡಿಯೋ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವೈರಲ್ ಆಗುತ್ತಿದೆ.‌

indigo copy

ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ತುಳು ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚು. ಅವರು ಎಲ್ಲೇ ಹೋದರೂ ಕರಾವಳಿಗರು ಸಿಕ್ಕರೇ ತುಳುವಿನಲ್ಲಿ ಮಾತನಾಡಿ ತಮ್ಮ ಭಾಷಾಪ್ರೇಮವನ್ನು ಮೆರೆಯುತ್ತಾರೆ. ಇದೀಗ ವಿಮಾನದಲ್ಲೂ ಕೂಡ ಅಂತಹದ್ದೆ ಸನ್ನಿವೇಶ ನಡೆದಿದೆ. ಇದನ್ನೂ ಓದಿ: ಪಾಕಿಸ್ತಾನ ತಾಲಿಬಾನ್ ಮಧ್ಯೆ ಬೇಲಿಗಾಗಿ ಘರ್ಷಣೆ – ತಂತಿಯನ್ನೇ ಕದ್ದ ಉಗ್ರರು

ಇಂಡಿಗೋ ವಿಮಾನ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮುಂಬೈನಿಂದ ಮಂಗಳೂರಿಗೆ ಹೊರಟಿತ್ತು. ಈ ವೇಳೆ ಪೈಲಟ್ ಇಂಗ್ಲಿಷ್ ಬದಲಿಗೆ ತುಳುವಿನಲ್ಲಿ ಅನೌನ್ಸ್‌ಮೆಂಟ್ ಕೊಟ್ಟಿದ್ದಾರೆ. ವಿಮಾನದಲ್ಲಿ ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ರಾಜ್ಯ ಭಾಷೆಯಲ್ಲಿ ಮಾತ್ರ ವಿಮಾನ ಹೊರಡುವಾಗ ಮತ್ತು ಇಳಿಯುವಾಗ ಪ್ರಯಾಣಿಕರಿಗೆ ಸೂಚನೆ ರವಾನಿಸುವ ಪದ್ಧತಿ ಇದೆ. ಈ ನಡುವೆ ಮುಂಬೈನಿಂದ ಮಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಕರಾವಳಿ ಕರ್ನಾಟಕದ ಜನ ಹೆಚ್ಚಿರುವುದನ್ನು ಗಮನಿಸಿದ ಪೈಲಟ್ ‘ಮಾತೆರೆಗ್ಲಾ ಸೊಲ್ಮೆಲು'(ಎಲ್ಲರಿಗೂ ನಮಸ್ಕಾರ) ಎನ್ನುತ್ತಾ ತುಳುವಿನಲ್ಲಿ ಮಾತು ಆರಂಭಿಸಿ ಅಗತ್ಯ ಸೂಚನೆಯನ್ನು ನೀಡಿದ್ದಾರೆ. ಈ ವೀಡಿಯೋ ಇದೀಗ ಕರಾವಳಿಯಾದ್ಯಂತ ಗಮನಸೆಳೆಯುತ್ತಿದೆ.

INDIGO FLIHT

ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್‌ಮೆಂಟ್ ಮಾಡಿದ ಪೈಲಟ್ ಪ್ರದೀಪ್ ಪದ್ಮಶಾಲಿ ಮೂಲತಃ ಉಡುಪಿಯವರು ಮುಂಬೈನಲ್ಲಿ ಪೈಲಟ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಇಂಡಿಗೋ ವಿಮಾನ ಪ್ರತಿದಿನ ಮುಂಬೈನಿಂದ ರಾತ್ರಿ 8 ಗಂಟೆಗೆ ಹೊರಡಿ ಮಂಗಳೂರಿಗೆ 9:30ಕ್ಕೆ ಮಂಗಳೂರಿಗೆ ತಲುಪುತ್ತದೆ. ಈ ವಿಮಾನ ಶುಕ್ರವಾರ ಹೊರಡುತ್ತಿದ್ದಂತೆ ಪ್ರದೀಪ್ ತಮ್ಮ ತುಳು ಭಾಷಾ ಪ್ರೇಮ ಮೆರೆದು ತುಳುವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ ಸರ್ಕಾರ ಜಾಹೀರಾತಿಗೆ ವಾರ್ಷಿಕ 2,000 ಕೋಟಿ ಖರ್ಚು ಮಾಡ್ತಿದೆ: ಎಎಪಿ

ತುಳು ಭಾಷೆ ಕರಾವಳಿ ಭಾಗದಲ್ಲಿ ಹೆಚ್ಚು ಮಾತನಾಡುತ್ತಿರುವುದರಿಂದಾಗಿ ತುಳು ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂಬ ಆಗ್ರಹ ಕೂಡ ನಿರಂತರವಾಗಿ ನಡೆಯುತ್ತಿದ್ದು, ಸರ್ಕಾರದ ಮುಂದೆ ಪ್ರತಿ ಬಾರಿ ಈ ಬಗ್ಗೆ ಪ್ರಸ್ತಾಪಗಳು ಕೇಳಿ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *