ಮಂಬೈ: ನಟಿ ನಿಖಿತಾ ತುಕ್ರಾಲ್ ತಮ್ಮ ಮುದ್ದಾದ ಹೆಣ್ಣು ಮಗುವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ನಿಖಿತಾ 2016 ಅಕ್ಟೋಬರ್ 16 ರಂದು ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಸಿಂಗ್ ಮಾಗೋ ಅವರನ್ನು ಮದುವೆಯಾಗಿದ್ದರು. ನಿಖಿತಾ ಕಳೆದ ವರ್ಷ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇತ್ತೀಚೆಗೆ ತಾವು ಮಗುವಿನೊಂದಿಗೆ ಇರುವ ಫೊಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಸ್ಯಾಂಡಲ್ವುಡ್ ನ ‘ರಾಜಾಸಿಂಹ’ ಚಿತ್ರದ ಶೂಟಿಂಗ್ ವೇಳೆ ನಿಖಿತಾ 7 ತಿಂಗಳ ಗರ್ಭಿಣಿಯಾಗಿದ್ದರು. ಚಿತ್ರ ತಂಡವು ನನ್ನ ಪರಿಸ್ಥಿತಿಯನ್ನು ಅರಿತುಕೊಂಡಿದ್ದು, ನನ್ನನ್ನು ಬಹಳ ಕಾಳಜಿಯಿಂದ ನೋಡಿಕೊಂಡಿದ್ದರು ಎಂದು ನಿಖಿತಾ ಚಿತ್ರ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.
ನಿಖಿತಾ ಮಗುವಿಗೆ `ಜಸ್ಮಿರಾ’ ಎಂದು ಹೆಸರಿಟ್ಟಿದ್ದಾರೆ. ಮಗುವಿಗೆ ಈಗ ಆರು ತಿಂಗಳು ತುಂಬಿದೆ. ಈ ಮೊದಲು ನಾನು ಹೊರಗೆ ಹೋದಾಗ ಜಸ್ಮಿರಾಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದೆ. ಆದ್ದರಿಂದ ನನಗೆ ಮಗು ಆಗಿರುವುದು ಬಹಳಷ್ಟು ಮಂದಿಗೆ ತಿಳಿದಿರಲಿಲ್ಲ. ಆದರೆ ಎಲ್ಲರಿಗೂ ಪರಿಚಯಿಸಲು ಇದು ಸೂಕ್ತ ಸಮಯವಾಗಿದೆ. ಆದ್ದರಿಂದ ಅವಳ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದೇನೆ ಎಂದು ನಿಖಿತಾ ಹೇಳಿದ್ದಾರೆ.
ನಿಖಿತಾ ಸ್ಯಾಂಡಲ್ವುಡ್ ನಲ್ಲೂ ಅಭಿನಯಿಸಿದ್ದಾರೆ. ದರ್ಶನ್, ಸುದೀಪ್ ಮತ್ತು ಪುನೀತ್ ರಾಜ್ಕುಮಾರ್ ಸ್ಟಾರ್ ಗಳ ಜೊತೆ ನಾಯಕಿಯಾಗಿ ನಟಿಸಿದ್ದು, ಬಿಗ್ ಬಾಸ್ ಸೀಸನ್ ಒಂದರಲ್ಲಿ ಸ್ಪರ್ಧಿಸಿದ್ದರು.
Thank u for all your like tweethearts. Good morning. ???????? pic.twitter.com/9kf7UmPAI7
— Nikita thukral (@thukralnikita) January 6, 2018
Hi everyone pic.twitter.com/l6CXV5Z4MY
— Nikita thukral (@thukralnikita) January 5, 2018