ರಂಗೇರಿದ ಚನ್ನಪಟ್ಟಣ ಉಪಕಣ – ಪತಿ ನಿಖಿಲ್‌ ಪರ ಮತಬೇಟೆಗಿಳಿದ ಪತ್ನಿ ರೇವತಿ

Public TV
2 Min Read
Revathi Nikhil 2

ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna By Election) ಅಖಾಡ ರಂಗೇರಿದೆ. ಉಭಯ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಪ್ರತ್ಯೇಕವಾಗಿ ಹಳ್ಳಿ, ಹಳ್ಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.

Revathi Nikhil 3

ಮತಬೇಟೆಗಿಳಿದ ನಿಖಿಲ್‌ ಪತ್ನಿ:
ಸೋಮವಾರವಾದ ಇಂದು ಸಹ 10ಕ್ಕೂ ಹೆಚ್ಚು ಗ್ರಾಮದಲ್ಲಿ ಪುತ್ರನ ಪರ ಮತಯಾಚನೆ ನಡೆಸಲಿದ್ದರೆ, ನಿಖಿಲ್‌ 15 ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದಾರೆ. ಚನ್ನಪಟ್ಟಣದ ಹೆಚ್.ಬ್ಯಾಡರಳ್ಳಿ, ಬೊಮ್ಮನಾಯಕನಹಳ್ಳಿ ಹಾಗೂ ಬೇವೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಇದರೊಂದಿಗೆ ಪತ್ನಿ ರೇವತಿ ಕೂಡ ನಿಖಿಲ್‌ ಪರವಾಗಿ ಮತಬೇಟೆಗಿಳಿದಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಬೆಳ್ಳಂ ಬೆಳಗ್ಗೆಯಿಂದಲೇ ಪತ್ನಿ ರೇವತಿ (Revathi Nikhil) ಪ್ರಚಾರ ಶುರು ಮಾಡಿದ್ದಾರೆ. ಚನ್ನಪಟ್ಟಣದ ಮಹಿಳಾ ಕಾಲೇಜು ಮುಂಭಾಗ ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿ ನಿಖಿಲ್‌ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ನಿಖಿಲ್‌ ಪತ್ನಿ ರೇವತಿ ಅವರಿಗೆ ಜೆಡಿಎಸ್ ಮಹಿಳಾ ಕಾರ್ಯಕರ್ತರು ಸಾಥ್‌ ನೀಡಿದ್ದಾರೆ. ಇದನ್ನೂ ಓದಿ: ಕೇರಳದಲ್ಲೂ ವಕ್ಫ್ ವಿವಾದ – ಒಂದೇ ಗ್ರಾಮದ 610 ಕುಟುಂಬಗಳಿಗೆ ಆಸ್ತಿ ಕಳೆದುಕೊಳ್ಳುವ ಭೀತಿ

Revathi Nikhil

ಇನ್ನೂ ಪ್ರಚಾರದ ವೇಳೆ ಮಾತನಾಡಿರುವ ನಿಖಿಲ್‌, ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತೆ. ದೇವೇಗೌಡರು ಕಳೆದ 30 ವರ್ಷಗಳಿಂದ ಹಿಂದೆ ನಿರ್ಣಯ ಮಾಡಿ ಇಗ್ಗಲೂರು ಡ್ಯಾಂ ಮಾಡಿದ್ರು. ಕೆಲವರು 17ಕೆರೆ ತುಂಬಿಸಿದ್ದೇವೆ ಅಂತ ಪ್ರಚಾರ ತೆಗೆದುಕೊಳ್ತಾರೆ. ಆದರೆ ಸದಾನಂದಗೌಡರವರ ಕಾಲದಲ್ಲಿ ಆ ಕೆರೆಗಳನ್ನ ತುಂಬಿಸಿದ್ದು. ವಿ. ಸೋಮಣ್ಣ ಅವರು ಅನುದಾನ ಕೊಟ್ಟು ಕೆರೆಗಳಿಗೆ ಮರುಜೀವ ನೀಡಿದ್ರು. ಕುಮಾರಸ್ವಾಮಿಯವರೂ ಸುಮಾರು 100ಕ್ಕೂ ಹೆಚ್ಚು ಕೆರೆಗಳನ್ನ ತುಂಬಿಸಿದ್ದಾರೆ ಎಂದು ಹೆಚ್‌ಡಿಕೆ ಸಾಧನೆಯನ್ನ ಬಣ್ಣಿಸಿದ್ರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ಬಸ್‌ – ಕನಿಷ್ಠ 20 ಮಂದಿ ದಾರುಣ ಸಾವು

ಈ ಹಿಂದೆ ಕುಮಾರಸ್ವಾಮಿ ಅವರು ಸಾರಾಯಿ, ಲಾಟರಿ ನಿಷೇಧ ಮಾಡಿದ್ರು. ಇತ್ತೀಚಿನ ಆನ್ಲೈನ್ ಗೇಮಗಳಿಗೆ ಯುವಕರು ಬಲಿ ಆಗ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಅಂದ್ರೆ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಚನ್ನಪಟ್ಟಣ ತಾಲೂಕಿನಲ್ಲಿ ಅತಿಹೆಚ್ಚು ಹಾಲು ಉತ್ಪಾದನೆ ಆಗುತ್ತೆ. ಸರ್ಕಾರ ರೈತರಿಗೆ ಸರಿಯಾದ ಬೆಂಬಲ ಬೆಲೆ ಕೊಡ್ತಿಲ್ಲ. ಹಾಗಾಗಿ ಈ ಬಾರಿ ಒಂದು ಅವಕಾಶ ಮಾಡಿಕೊಡಿ. ಈ ಚುನಾವಣೆಯ ಸ್ಪರ್ಧೆ ಅನಿರೀಕ್ಷಿತ. ಕಾಂಗ್ರೆಸ್ ಅಭ್ಯರ್ಥಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ನನಗೆ ಒಂದು ಅವಕಾಶ ಕೊಟ್ಟು ನೋಡಿ. ಈ ಭಾಗದಲ್ಲಿ ಒಂದು ಕೈಗಾರಿಕೆ ನಿರ್ಮಾಣ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡ್ತೇವೆ ಎಂದು ನಿಖಿಲ್‌ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಅನುಮತಿ ಇಲ್ಲದೆ ನೌಟಂಕಿ ಕಾರ್ಯಕ್ರಮ ಆಯೋಜನೆ – ಗ್ರಾಮ ಮುಖ್ಯಸ್ಥನ ಪ್ರತಿನಿಧಿಗೆ ಎಂಜಲು ನೆಕ್ಕಿಸಿದ ಪೊಲೀಸರು

Share This Article