ರಾಮನಗರ: ಚನ್ನಪಟ್ಟಣದ ವಕೀಲರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ತಾಲ್ಲೂಕಿನ ವಕೀಲರ ಬಳಿ ಮತ ಯಾಚನೆ ಮಾಡಿದರು.
ಸಭೆಯಲ್ಲಿ ಮಾತನಾಡಿದ ಅವರು, ಇದು ನನ್ನ ಅನಿರೀಕ್ಷಿತ ಚುನಾವಣೆ. ಇನ್ನೂ 3.5 ವರ್ಷ ಮಾತ್ರ ಬಾಕಿ ಇದೆ. ನನಗೆ ಒಂದು ಅವಕಾಶ ಕೊಟ್ಟು ನೋಡಿ. ಪಕ್ಷಾತೀತವಾಗಿ ನಾನು ಮನವಿ ಮಾಡ್ತಿದ್ದೇನೆ.ನಿಮ್ಮ ಸಹಕಾರ ನನ್ನ ಮೇಲೆ ಇರಲಿ. ನಿಮ್ಮ ಜೊತೆಜೊತೆಗೆ ಕೆಲಸ ಮಾಡ್ತೀನಿ. ಇದು ಅನುಕಂಪದ ಮೇಲೆ ನಡೆಯೋ ಚುನಾವಣೆ ಅಲ್ಲ. ಅಭಿವೃದ್ಧಿ ಮೇಲೆ ನಡೆಯುವ ಚುನಾವಣೆ .ರಾಜ್ಯ ಸರ್ಕಾರದಿಂದ ನಾವು ಅನುದಾನ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಕೇಂದ್ರದಿಂದ ಅನುದಾನ ತಂದು ಕೆಲಸ ಮಾಡ್ತೀವಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ
ಮಂಡ್ಯದಲ್ಲಿ ಉದ್ಯೋಗ ಮಾಡಿದ್ವಿ. ಇಡೀ ರಾಜ್ಯದ ಯುವಕರು ಉದ್ಯೋಗ ಮೇಳಕ್ಕೆ ಬಂದಿದ್ದರು. 1,200 ಜನರಿಗೆ ಕೆಲಸ ಕೊಡಿಸಿದ್ದೇವೆ. ಇದನ್ನ ಮುಂದುವರೆಸುತ್ತೇವೆ. STಗೆ ಮೀಸಲಾತಿ ಕೊಡಿಸಲು ದೇವೇಗೌಡರು ಹೋರಾಟ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆ ದೇವೇಗೌಡರು ಮಾತಾಡಿದ್ದಾರೆ. ಎಲ್ಲಾ ಸಮುದಾಯಗಳು ಮುಖ್ಯ ವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತೀವಿ. ಈ ಬಾರಿ ನನ್ನ ಕೆಲಸ ನೋಡಲು ನನಗೆ ಒಂದು ಅವಕಾಶ ಕೊಡಿ ಎಂದು ವಕೀಲರಿಗೆ ನಿಖಿಲ್ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎ.ಪಿ.ರಂಗನಾಥ್ ಅವರು, ಚನ್ನಪಟ್ಟಣ ವಕೀಲರ ಸಂಘದ ಅಧ್ಯಕ್ಷರಾದ ಗಿರೀಶ್ ಟಿ.ವಿ ಅವರು, ಉಪಾಧ್ಯಕ್ಷರಾದ ಎಸ್.ಬಿ ಧನಂಜಯ ಅವರು, ಪ್ರಧಾನ ಕಾರ್ಯದರ್ಶಿ ದೇವರಾಜು ಅವರು ಸೇರಿದಂತೆ ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು. ಇದನ್ನೂ ಓದಿ: ಸಂಡೂರು ಅಖಾಡದಲ್ಲಿ ಪ್ರಚಾರ – 15 ದಿನದಲ್ಲಿ ಸಿದ್ದರಾಮಯ್ಯ ರಾಜೀನಾಮೆ : ಬಿಎಸ್‌ವೈ