ಮಂಗಳೂರು: ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಸಾಲು ಸಾಲು ಹತ್ಯೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದ್ದು, ನಾಳೆ ಶಾಂತಿ ಸಭೆ ನಡೆಯಲಿದೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಮಾತನಾಡಿ, ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಮೂರು ದಿನ ಕಠಿಣ ಪರಿಸ್ಥಿತಿ ಇದೆ. ಹೀಗಾಗಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತದೆ. ನಗರ ವ್ಯಾಪ್ತಿಗೂ ಬಂದ್ ಆದೇಶ ಅನ್ವಯವಾಗಲಿದೆ ಎಂದರು.
Advertisement
Advertisement
ಇದು ನೈಟ್ ಕರ್ಫ್ಯೂ ಅಲ್ಲ, ಬದಲಾಗಿ ಜನ ಕಡಿಮೆ ಮಾಡಿ ಪೊಲೀಸರಿಗೆ ಶಾಂತಿ ಸುವ್ಯವಸ್ಥಿತೆ ಕಾಪಾಡುವ ಉದ್ದೇಶವಾಗಿದೆ. ಅಗತ್ಯ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ ಸಿನಿಮಾ ಶೋ ಬಂದ್ ಮಾಡಲು ಸೂಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿ ಕೊಡುತ್ತದೆ: ತೇಜಸ್ವಿ ಸೂರ್ಯ
Advertisement
Advertisement
ಸಾರ್ವಜನಿಕ ಸಭೆ ಸಮಾರಂಭ ಮಾಡುವಂತೆ ಇಲ್ಲ, ಆಯೋಜಕರಿಗೆ ಸೂಚನೆ ಮಾಡಲಾಗಿದೆ. ರಾತ್ರಿ ಅಗತ್ಯ ಪ್ರಯಾಣ ಮಾಡುವವರು ಟಿಕೆಟ್ ಗಳನ್ನು ತೋರಿಸಿ ಪ್ರಯಾಣ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಇಡೀ ಬಿಜೆಪಿ ಪಕ್ಷ ಹಾಳಾಗಿ ಹೋಗುತ್ತೆ, ಅಣ್ಣಪ್ಪನ ಶಾಪ ಇದೆ: ಮಹೇಶ್ ಶೆಟ್ಟಿ ತಿಮರೋಡಿ ಕಿಡಿ
ದ.ಕ ಜಿಲ್ಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆ ನಡೆಸಲಾಗುತ್ತದೆ. ಪೊಲೀಸ್ ಹಿರಿಯ ಅಧಿಕಾರಿಗಳು, ವಿವಿಧ ಧರ್ಮದ ಮುಖಂಡರು ಹಾಗೂ ರಾಜಕೀಯ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಸಲಹೆ ಸೂಚನೆಗಳನ್ನು ಎಲ್ಲರಿಂದ ಪಡೆಯಲಾಗುತ್ತದೆ. ಜಿಲ್ಲಾಡಳಿತದ ಮುಂದಿನ ನಿಯಮ, ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.