ಬೆಂಗಳೂರು: ಡ್ರಗ್ ಪೆಡ್ಲರ್ (Drug) ಇರುವಿಕೆ ಕುರಿತು ಪರಿಶೀಲನೆಗೆ ತೆರಳಿದ್ದ ಪೊಲೀಸರ ಮೇಲೆಯೇ ನೈಜೀರಿಯಾ ಪ್ರಜೆಗಳು (Nigerian Citizen) ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ರಾಜಾನುಕುಂಟೆ ಪೊಲೀಸ್ ಠಾಣೆಯ ಮಾವಳ್ಳಿ ಪುರದಲ್ಲಿ ತಡರಾತ್ರಿ 12 ಗಂಟೆಯಲ್ಲಿ ಈ ಘಟನೆ ನಡೆದಿದೆ. ಡ್ರಗ್ ಪೆಡ್ಲರ್ ಇರುವಿಕೆ ಬಗ್ಗೆ ಸಿಸಿಬಿ ಮಾಹಿತಿ ಕಲೆಹಾಕಿತ್ತು. ಈ ಸಂಬಂಧ ಪರಿಶೀಲನೆಗೆ ತೆರಳಿದಾಗ ಪೊಲೀಸರ ಮೇಲೆ ನೈಜೀರಿಯಾ ಪ್ರಜೆಗಳು ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆಯಿಂದ ಕಟ್ಟೆಯೊಡೆದ ಆಕ್ರೋಶ; 3 ಕಿಮೀ ಪಾರ್ಥಿವ ಶರೀರ ಮೆರವಣಿಗೆಗೆ ಸಿದ್ಧತೆ – ಕಾಲೇಜು ಬಂದ್ಗೆ ಕರೆ!
Advertisement
Advertisement
ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿವೆ. ಆರೋಪಿಗಳು ಕಾರಿನ ಗಾಜು ಒಡೆದಿ ಹಾಕಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.