ಹಾಲಿವುಡ್ನ ಸ್ಟಾರ್ ಗಾಯಕ ನಿಕ್ ಜೋನಸ್ ಇದೀಗ ತಮ್ಮ ಮಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುದ್ದು ಮಗಳ ಎಂಟ್ರಿಯಿಂದ ಜೀವನ ಹೇಗೆಲ್ಲಾ ಬದಲಾವಣೆ ಆಗಿದೆ ಅಂತಾ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
Advertisement
೨೦೧೮ರಲ್ಲಿ ಪ್ರಿಯಾಂಕ ಚೋಪ್ರಾ, ಹಾಲಿವುಡ್ ಸ್ಟಾರ್ ಗಾಯಕ ನಿಕ್ ಅವರನ್ನ ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ಮನೆಗೆ ಮುದ್ದು ಮಗಳ ಎಂಟ್ರಿಯಾಗಿದೆ. ಬಾಡಿಗೆ ತಾಯಿಯ ಮೂಲಕ ಮಗಳನ್ನ ಪಡೆದಿದ್ದಾರೆ. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಡಲಾಗಿದೆ. ಇದೀಗ ಸಂದರ್ಶನವೊಂದರಲ್ಲಿ ಮಗಳು ಬಂದ ಜೀವನ ಹೇಗಿದೆ ಎಂಬುನ್ನ ನಿಕ್ ಜೋನಸ್ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?
Advertisement
ತಂದೆಯಾದ ಮೇಲೆ ಜವಾಬ್ದಾರಿ ಹೆಚ್ಚಿದೆ, ಅವಳ ಪಾಲನೆಯಲ್ಲಿ ಖುಷಿಯಿದೆ. ಮಗಳು ಬಂದ ಜೀವನ ಬದಲಾಗಿದೆ. ಮಗು ಆರೋಗ್ಯದಲ್ಲಿ ಹೇಗೆಲ್ಲಾ ಬದಲಾವಣೆ ಆಗುತ್ತದೆ ಎಂದು ಕೂಡ ತಿಳಿಸಿದ್ದಾರೆ. ಎಲ್ಲಾ ಚೆನ್ನಾಗಿದೆ ಮಗಳು ಬಂದ ಮೇಲೆ ಖುಷಿ ಇನ್ನೂ ಜಾಸ್ತಿಯಾಗಿದೆ ಎಂದು ಮುದ್ದು ಮಗಳ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]