CinemaKarnatakaLatestMain PostSandalwoodSouth cinema

‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

Advertisements

ರ್ತಮಾನಗಳಿಗೆ ಸದಾ ಸ್ಪಂದಿಸುವ ಮತ್ತು ಸುಖಾಸುಮ್ಮನೆ ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇಡೀ ಭಾರತೀಯ ಸಿನಿಮಾ ರಂಗವೇ ಬೆಚ್ಚಿಬೀಳುವಂತಹ ಸುದ್ದಿಯನ್ನು ಕೊಟ್ಟಿದ್ದಾರೆ. ಇದು ನಿಜವೋ, ಸುಳ್ಳೋ ಗೊತ್ತಿಲ್ಲ ಆದರೆ, ತಮ್ಮ ನಿರ್ದೇಶನದ ಲಡ್ಕಿ ಸಿನಿಮಾ ಭಾರತ ಮತ್ತು ಚೀನಾದಲ್ಲೇ 40 ಸಾವಿರ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿದೆ ಎಂದು ಹೇಳಿದ್ದಾರೆ. ಈ ಸುದ್ದಿ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಕೋಲಾಹಲ ಉಂಟು ಮಾಡಿದೆ.

ಲಡ್ಕಿ  ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಭಾರತದಲ್ಲಿ ಮೂಡಿ ಬಂದ ಮೊದಲ ಮಾರ್ಷಲ್ ಆರ್ಟ್ ಸಿನಿಮಾ ಇದಾಗಿದೆ. ಈ ಸಿನಿಮಾ ಜುಲೈ 15 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾವೊಂದು ಭಾರತ ಮತ್ತು ಚೀನಾದಲ್ಲಿ 40 ಸಾವಿರ ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವ ವಿಷಯವನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ತಮ್ಮದೇ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕರಣ್‌ ಜೋಹರ್‌ ನಿರ್ಮಾಣದಲ್ಲಿ ಈ ಸ್ಟಾರ್‌ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

ಈ ಹಿಂದೆ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಚೀನಾದಲ್ಲಿ ಆರು ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿತ್ತು. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಎಂಟು ಸಾವಿರ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಂಡಿದೆ ಎಂದು ಹೇಳಲಾಗಿತ್ತು. ಇದು ಈ ಎಲ್ಲ ದಾಖಲೆಗಳನ್ನು ಮುರಿದು, ಯಾರೂ ಬ್ರೇಕ್ ಮಾಡದೇ ಇರುವಂತಹ ದಾಖಲೆಯನ್ನು ಸೃಷ್ಟಿಸಲು ಮುಂದಾಗಿದೆ.

ರಾಮ್ ಗೋಪಾಲ್ ವರ್ಮಾ ಅವರು ಈ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಪೋಸ್ಟರ್ ಬಗ್ಗೆ ಹಲವು ಅನುಮಾಗಳು ಕೂಡ ವ್ಯಕ್ತವಾಗಿವೆ. ನಿಜವಾಗಿಯೂ ಅಷ್ಟೊಂದು ಥಿಯೇಟರ್ ನಲ್ಲಿ ಈ ಸಿನಿಮಾ ರಿಲಿಸ್ ಆಗತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಪೂಜಾ ಭಲೇಕರ್ ಮುಖ್ಯ ಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಅವರು ಸ್ವತಃ ಮಾರ್ಷಲ್ ಆರ್ಟ್ ಕಲಿತಿದ್ದಾರೆ. ಅದನ್ನೇ ಸಿನಿಮಾದಲ್ಲೂ ತೋರಿಸಿದ್ದಾರೆ.

Live Tv

Leave a Reply

Your email address will not be published.

Back to top button