ಬೆಂಗಳೂರು: ಗುರುವಾರ ರಾಜ್ಯಾದ್ಯಂತ ಪಿಎಫ್‌ಐ(PFI) ನಾಯಕರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ಮತ್ತು ರಾಜ್ಯ ಪೊಲೀಸ್ ದಾಳಿ ನಡೆಸಿತ್ತು. ದಾಳಿ ಸಂದರ್ಭದಲ್ಲಿ ಪಿಎಫ್‌ಐ ನಾಯಕನ ಮನೆಯಲ್ಲಿ ಸಾವರ್ಕರ್(Savarkar) ಕುರಿತ ಪುಸ್ತಕ ಲಭ್ಯವಾಗಿದೆ.
ಸದ್ಯ ಈ ಪುಸ್ತಕ, ಧರ್ಮ ಸಂಬಂಧಿ ಪುಸ್ತಕಗಳು ಮೊಬೈಲ್‌ಗಳು, ಬ್ಯಾಂಕ್ ಪಾಸ್ ಬುಕ್, ಹೀಗೆ ಎಲ್ಲವುಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೆಕ್ಕಿ ಸೇರಿ 7 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್: ಆರೋಪಿಗಳ ಕೆಲಸ ಏನು?
Advertisement
Advertisement
ಕಲಬುರಗಿಯ ಶೇಖ್ ಇಲಿಯಾಜ್ ಅಲಿ ಮನೆಯಲ್ಲಿ 14.3 ಲಕ್ಷ ರೂ. ನಗದು ಹಾಗೂ ಶಿವಮೊಗ್ಗದಲ್ಲಿ ಸೆರೆಸಿಕ್ಕ ಶಾಹಿದ್ ಮನೆಯಲ್ಲಿ 19 ಲಕ್ಷ ರೂ. ನಗದು ಪತ್ತೆಯಾಗಿದೆ. ನಗದಿನ ಮೂಲ, ಹಣಕಾಸು ವ್ಯವಹಾರದ ಬಗ್ಗೆ ತನಿಖೆ ಆರಂಭವಾಗಿದೆ. ಎಲೆಕ್ಟ್ರಾನಿಕ್ ಡಿವೈಸ್‌ಗಳ ಡಿಕೋಡಿಂಗ್ ಆರಂಭವಾಗಿದೆ. ಇದನ್ನೂ ಓದಿ: ಭಾರತ ಇಸ್ಲಾಮಿಕ್ ರಾಷ್ಟ್ರವಾಗಬೇಕು, ಪೂರ್ಣ ಸ್ವಾತಂತ್ರ್ಯಕ್ಕೆ ಬಾಂಬ್ ತಯಾರಿ: ಶಿವಮೊಗ್ಗ ಆರೋಪಿಗಳಿಗಿದೆ ಐಸಿಸ್ ಲಿಂಕ್