ರಾಷ್ಟ್ರಧ್ವಜ ಕಂಡರೆ ಬೆಂಕಿ ಹಚ್ಚುತ್ತಿದ್ದ ಶಾರೀಕ್ ಗ್ಯಾಂಗ್

Public TV
1 Min Read
mangaluru 1

ಬೆಂಗಳೂರು: ಮಂಗಳೂರು (Mangaluru) ಕುಕ್ಕರ್ ಬಾಂಬರ್ ಶಾರೀಕ್‍ನ (Shariq) ಮುಖವಾಡ ಇನ್ನಷ್ಟು ಬಯಲಾಗಿದೆ. ಪಕ್ಕಾ ಮತೀಯವಾದಿ ಆಗಿದ್ದ ಶಾರೀಕ್, ತುಂಗಾನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಬಳಿಕ ತಲೆಮರೆಸಿಕೊಂಡಿದ್ದ. ಈತ ಹಾಗೂ ಈತನ ಗ್ಯಾಂಗ್ ಕೇವಲ ಸಾರ್ವಜನಿಕರ ಜೀವ ತೆಗೆಯೋದು ಮಾತ್ರವಲ್ಲದೇ, ರಾಷ್ಟ್ರಧ್ವಜವನ್ನು ಸುಡುವುದು ಇವರ ಖಯಾಲಿ ಆಗಿತ್ತು. ಈಗಾಗಲೇ ರಾಷ್ಟ್ರಧ್ವಜ ಸುಟ್ಟಿರುವ ಬಗ್ಗೆ ಎನ್‍ಐಎ (NIA) ಎಫ್‍ಐಆರ್‌ನಲ್ಲಿ (FIR) ಉಲ್ಲೇಖಿಸಿದೆ.

ನವೆಂಬರ್ 15ರಂದು ಎನ್‍ಐಎ ಎಫ್‍ಐಆರ್ ದಾಖಲಿಸಿದೆ. ಮಂಗಳೂರು ಆಟೋ ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಎರಡು ದಿನದಲ್ಲಿ ಎನ್‍ಐಎ ತನಿಖೆಗೆ ವಹಿಸೋ ಸಾಧ್ಯತೆ ಇದೆ. ತನಿಖೆ ಬಳಿಕ ಶಾರೀಕ್ ಪಾತ್ರದ ಇನ್ನಷ್ಟು ಸ್ಫೋಟಕ ಸತ್ಯಗಳು ಹೊರಬರಬೇಕಿದೆ. ಇದೀಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್‍ಐಆರ್‌ನಲ್ಲಿ ಶಿವಮೊಗ್ಗದ ಮಾಝ್, ಯಾಸಿನ್ ಜೊತೆಯಲ್ಲಿ ಶಾರೀಕ್ ಕೂಡ ಭಾಗಿಯಾಗಿದ್ದ. ಆದರೆ ಆ ಸಂದರ್ಭದಲ್ಲಿ ಶಾರೀಕ್‌ ತಪ್ಪಿಸಿಕೊಂಡಿದ್ದ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಈತ ಸುಟ್ಟು ಹಾಕಿರುವ ಭಾರತದ ಧ್ವಜದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಅಷ್ಟೇ ಅಲ್ಲದೇ ಮಾಝ್ ಮನೆಯಲ್ಲಿ ಸ್ಫೋಟಕ ವಸ್ತುಗಳ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಸುಟ್ಟಿರುವ ರಾಷ್ಟ್ರಧ್ವಜವು ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕುಕ್ಕರ್‌ ಬಾಂಬರ್‌ ಶಾರೀಕ್‌ ಗುಣಮುಖನಾಗಲು 25 ದಿನ ಬೇಕು

Mangaluru Blast Case The Shariq cooker bomb capable of blowing up the bus FSL Investigation report 1

ಇನ್ನೂ ಭಾರತದ ಬಾವುಟ ಕಂಡರೆ ಶಾರೀಕ್‍ಗೆ ಆಗುತ್ತಿರಲಿಲ್ಲ. ಭಾರತದ ಬಾವುಟ ಸುಡಬೇಕು. ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಬೇಕು ಎಂಬ ಉದ್ದೇಶವನ್ನು ಈತ ಇಟ್ಟುಕೊಂಡಿದ್ದ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಈತನಿಗೆ ಕಣ್ಣು ಕುಕ್ಕುತ್ತಾ ಇತ್ತಂತೆ. ಅದಕ್ಕೆ ಗ್ರಾಹಕನ ಸೋಗಿನಲ್ಲಿ ಭಾರತದ ಬಾವುಟ ತರೋದು, ಅದಕ್ಕೆ ಬೆಂಕಿ ಹಚ್ಚಿ ವಿಕೃತ ಸಂತೋಷ ಪಡುತ್ತಾ ಇದ್ದ ಎಂಬ ಸ್ಫೋಟಕ ವಿಷಯ ಬಯಲಾಗಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್‌ – ತಮಿಳುನಾಡು, ಕೇರಳದಲ್ಲೂ ತನಿಖೆ ಚುರುಕು : ಪ್ರವೀಣ್ ಸೂದ್

Live Tv
[brid partner=56869869 player=32851 video=960834 autoplay=true]

Share This Article