ಬೆಂಗಳೂರು: ಐಸಿಸ್ ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ರಾಜ್ಯದ ಮೂವರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
ವಿಶೇಷ ಕೋರ್ಟ್‌ಗೆ ಬೆಂಗಳೂರಿನ ಮೊಹಮ್ಮದ್ ತೌಕಿರ್, ಜೊಹೈಬ್ ಮನ್ನಾ ಮತ್ತು ಭಟ್ಕಳದ ಮೊಹಮ್ಮದ್ ಶಿಹಾಬ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ: ಜಾನುವಾರು ರಕ್ಷಣೆ ವೇಳೆ ಪೊಲೀಸರಿಗೆ ಬುರ್ಕಾಧಾರಿ ಮಹಿಳೆಯರಿಂದ ಅಡ್ಡಿ
Advertisement
Advertisement
ಆರೋಪ ಏನು?
ತೌಕಿರ್ ಮತ್ತು ಮನ್ನಾ ಕುರಾನ್ ಸರ್ಕಲ್ ಗುಂಪಿನ ಮೂಲಕ ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರಿಸುತ್ತಿದ್ದರು. ಸಿರಿಯಾದಂತಹ ಐಸಿಸ್ ಪ್ರದೇಶಗಳಿಗೆ ಬೆಂಗಳೂರು ಮತ್ತು ಕರ್ನಾಟಕದಿಂದ ಮುಸ್ಲಿಂ ಯುವಕರನ್ನು ಕಳುಹಿಸುತ್ತಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಹನುಮಜಯಂತಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರ
Advertisement
ಈ ಮೂವರು ಉಗ್ರರಿಗಾಗಿ ಹಣವನ್ನು ಸಂಗ್ರಹಿಸುತ್ತಿದ್ದರು. ಮಹಮ್ಮದ್ ತೌಕಿರ್ ಮತ್ತು ಶಿಹಾಬ್ ಈ ಹಿಂದೆ ಐಸಿಸ್ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲು ಅಕ್ರಮವಾಗಿ ಸಿರಿಯಾಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪ ಇದೆ.