ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಶ್ವ ವಿಖ್ಯಾತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. ಆದರೆ ರಸ್ತೆಯ ಅಗಲೀಕರಣಕ್ಕೆ ಲಕ್ಷಾಂತರ ಮರಗಳನ್ನು ಕಡಿಯುವ ಸಾಧ್ಯತೆಗಳಿರುವುದರಿಂದ ಹುಲಿ, ಆನೆ ಸೇರಿದಂತೆ ವನ್ಯಜೀವಿಗಳ ಆವಾಸ ಸ್ಥಾನವಾಗಿರುವ ಬಂಡೀಪುರಕ್ಕೆ ಕಂಟಕ ಎದುರಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗುಂಡ್ಲುಪೇಟೆಯಿಂದ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಬಂಡೀಪುರದ ಅರಣ್ಯದ ನಡುವೆ ಹಾದು ಹೋಗುವ ಹೆದ್ದಾರಿ ಸಂಖ್ಯೆ 181 ರಲ್ಲಿ ಮೇಲು ಕಾಮನಹಳ್ಳಿಯಿಂದ ಕೆಕ್ಕನಹಳ್ಳದವರೆಗಿನ 13.2 ಕಿ.ಮೀ ರಸ್ತೆಯನ್ನು ಅಗಲೀಕರಣ ಮಾಡುವ ಪ್ರಸ್ತಾಪವನ್ನು ಅರಣ್ಯ ಇಲಾಖೆಗೆ ಸಲ್ಲಿಸಿದೆ. ಇದಕ್ಕಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 24 ಎಕರೆಗಳಷ್ಟು ಜಾಗವನ್ನು ನೀಡಬೇಕೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆಯ ಅನುಮತಿ ಕೋರಿದೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧ
Advertisement
Advertisement
ಈಗಾಗಲೇ 2 ಹೆದ್ದಾರಿಗಳು ಬಂಡೀಪುರ ಹುಲಿ ಸಂರಕ್ಷಣಾಧಾಮದ ಮೂಲಕ ಹಾದು ಹಾದುಹೋಗುತ್ತಿವೆ. ಈ ಹೆದ್ದಾರಿಗಳಿಂದ ಈಗಾಗಲೇ ವನ್ಯಜೀವಿಗಳ ಸ್ವಚ್ಛಂದ ಓಡಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಅತಿಯಾದ ವಾಹನಗಳ ಓಡಾಟದಿಂದ ಶಬ್ದ ಮಾಲಿನ್ಯ, ಘನ ತ್ಯಾಜ್ಯ ಇತ್ಯಾದಿಗಳಿಂದಾಗುವ ಮಾಲಿನ್ಯ, ವನ್ಯಜೀವಿಗಳ ವರ್ತನೆಗಳ ಮೇಲೆ ಪ್ರಭಾವ ಮತ್ತು ಇತರ ಹಲವಾರು ತೊಂದರೆಗಳನ್ನು ವನ್ಯಜೀವಿಗಳು ಈ ಹೆದ್ದಾರಿಗಳಿಂದ ಎದುರಿಸುತ್ತಿವೆ. ಇದನ್ನೂ ಓದಿ: ಸೆಕ್ಸ್ ವೇಳೆ ಕಾಂಡೋಮ್ ಬದಲು ಗಮ್ ಹಚ್ಚಿ ಪ್ರಾಣವೇ ಕಳ್ಕೊಂಡ!
Advertisement
Advertisement
ಅರಣ್ಯದಲ್ಲಿ ಹುಲಿಯೂ ಸೇರಿದಂತೆ ಆನೆ, ಚಿರತೆ, ಜಿಂಕೆ, ಕಡವೆ ಹಾಗೂ ಇನ್ನಿತರೇ ಪ್ರಾಣಿಗಳು ಅತೀ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಮೃತಪಟ್ಟಿವೆ. ಲೆಕ್ಕವಿರದಷ್ಟು ಉಭಯ ಚರಜೀವಿಗಳು, ಸರೀಸೃಪಗಳು, ಹಕ್ಕಿಗಳು ತಮ್ಮ ಜೀವ ಕಳೆದುಕೊಂಡಿವೆ. ಈಗ ರಸ್ತೆ ಅಗಲೀಕರಣ ಮಾಡಲು ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ. ವನ್ಯ ಪ್ರಾಣಿಗಳ ಆವಾಸಸ್ಥನಕ್ಕೆ ಧಕ್ಕೆಯಾಗಲಿದೆ ಎಂದು ವನ್ಯಜೀವಿ ತಜ್ಞರು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಪರಿಸರಕ್ಕೆ ಮಾರಕವಾಗಿರುವ ಹೆದ್ದಾರಿ ಅಗಲೀಕರಣಕ್ಕೆ ಅವಕಾಶ ನೀಡಬಾರದು. ಅವಕಾಶ ನೀಡಿದಲ್ಲಿ ಸೂಕ್ಷ್ಮ ಪರಿಸರ ವಲಯದ ನೀತಿ ನಿಯಮಗಳ ಉಲ್ಲಂಘನೆಯಾಗಲಿದೆ ಎಂಬುದು ಪರಿಸರವಾದಿಗಳ ಅಭಿಮತವಾಗಿದೆ.