ಬೆಂಗಳೂರು: ಅಂಕೋಲಾದ ಶಿರೂರಿನ (Shiroor)ಗುಡ್ಡ ಕುಸಿತ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಬೇಜವಾಬ್ದಾರಿಯೇ ಕಾರಣ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ರಸ್ತೆ ಮಾಡಿದ್ದ ಕಂಪನಿ ಐಆರ್‌ಬಿ (IRB) ಕಂಪನಿ ಮೇಲೆ ಒತ್ತಡ ತಂದು 8-10 ಜೆಸಿಬಿ, ಇಟಾಚಿ ಬಳಸಿ ರಸ್ತೆ ಕ್ಲಿಯರ್ ಮಾಡೋ ಕೆಲಸ ಮಾಡಿದ್ದೇವೆ. ಬಹುತೇಕ ರಸ್ತೆ ಕ್ಲೀಯರ್ ಮಾಡುವ ಕೆಲಸ ಆಗಿದೆ. ರಸ್ತೆ ಕ್ಲೀಯರ್ ಆದ ಮೇಲೆ ಸಂಚಾರಕ್ಕೆ ಬಿಡಬೇಕಾ ಅಂತ ಪೊಲೀಸ್ ಮತ್ತು ನ್ಯಾಷನಲ್ ಹೈವೇ ಅವರು ತೀರ್ಮಾನ ಮಾಡ್ತಾರೆ. ಗುಡ್ಡ ಇನ್ನು ತೇವಾಂಶ ಇರುವುದರಿಂದ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಸೇಫ್ಟಿ ಎಂಜಿನಿಯರ್ ಗಳು ಪರಿಶೀಲನೆ ಮಾಡಿದ ಮೇಲೆ ತೀರ್ಮಾನ ಮಾಡ್ತೀವಿ. ಕುಸಿತ ಅಗಿರುವ ಜಾಗದಲ್ಲಿ ಕ್ಲೀಯರ್ ಮಾಡೋ ಕೆಲಸ ಆಗ್ತಿದೆ ಅಂತ ಮಾಹಿತಿ ನೀಡಿದರು. ಇದನ್ನೂ ಓದಿ: ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದೆ ಗ್ಯಾಸ್
Advertisement
Advertisement
ನಿರಂತರವಾಗಿ ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಇದರಿಂದ ಕೆಲಸಕ್ಕೆ ತೊಂದರೆ ಆಗುತ್ತಿದೆ. ವಾಹನಗಳ ಸಂಚಾರವನ್ನು ಈಗ ಬೇರೆ ಕಡೆ ಡೈವರ್ಟ್ ಮಾಡಲಾಗಿದೆ. ಒಂದು ಕುಟುಂಬದ 5 ಜನರು ಮಣ್ಣು ಕುಸಿತಕ್ಕೆ ಸಿಲುಕಿದ್ದಾರೆ 3 ಜನರ ಶವ ಸಿಕ್ಕಿದೆ. ಇದರಲ್ಲಿ ಒಬ್ಬರು ತಮಿಳುನಾಡಿನ ಮೂಲದ ಡ್ರೈವರ್ ದೇಹ ಸಿಕ್ಕಿದೆ.ಇಬ್ಬರ ಬಾಡಿ ಸಿಗಬೇಕಾಗಿದ್ದು ಶೋಧ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಪಂಚೆಯುಟ್ಟ ಬಂದಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ್ದ ಸಿಬ್ಬಂದಿಯಿಂದ ಕ್ಷಮೆಯಾಚನೆ
Advertisement
ಇನ್ನೊಂದು ಟ್ಯಾಂಕರ್ ಸಿಕ್ಕಿ ಹಾಕಿಕೊಂಡಿದೆಯಾ ಅನ್ನೋ ಅನುಮಾನ ಇದೆ. ಆದರೆ BPCL ಮತ್ತು HPCL ಕಂಪನಿಯಾಗಲಿ ಯಾವುದೇ ಟ್ರಾನ್ಸ್ ಪೋರ್ಟ್ ಕಂಪನಿಗಳು ಟ್ಯಾಂಕರ್ ಮಿಸ್ ಆಗಿದೆ ಅಂತ ದೂರು ಕೊಟ್ಟಿಲ್ಲ. ನಮಗೆ ಖಚಿತ ಇರೋ ಮಾಹಿತಿ ಒಂದು ಟ್ಯಾಂಕರ್ ಮಾತ್ರ ನೀರಿನಲ್ಲಿ ಸಿಲುಕಿದೆ. ಅ ಟ್ಯಾಂಕರ್‌ನಲ್ಲೂ ಗ್ಯಾಸ್ ಇದೆ. ನಿನ್ನೆ ಗ್ಯಾಸ್ ಸ್ವಲ್ಪ ಲೀಕ್ ಆಗ್ತಿತ್ತು. HPCL, BPCL ನೇವಿ ಅವರ ಸಹಾಯದಿಂದ ಲೀಕೇಜ್ ತಡೆಯೋ ಕೆಲಸ ಮಾಡಿದ್ದಾರೆ. HPCL ಮತ್ತು BPCL ಕಂಪನಿಗೆ ಜಿಲ್ಲಾಡಳಿತದ ಮೂಲಕ ನೊಟೀಸ್ ಜಾರಿ ಮಾಡಿದ್ದೇವೆ. ಸುರಕ್ಷಿತವಾಗಿ ನೀರಲ್ಲಿ ಇರೋ ಟ್ಯಾಂಕರ್ ಹೊರಗೆ ತೆಗೆಯಬೇಕು. ಗ್ಯಾಸ್‌ನಿಂದ ಯಾವುದೇ ಅನಾಹುತ ಅಗಬಾರದು. ದುರ್ಘಟನೆ ಆಗದೇ ಹಾಗೇ ಗ್ಯಾಸ್ ಟ್ಯಾಂಕ್ ನಿರ್ವಹಣೆ ಮಾಡಬೇಕು ಅಂತ ಹೇಳಿದ್ದೇವೆ ಅಂತ ಮಾಹಿತಿ ನೀಡಿದ್ರು.
Advertisement
NDRF, SDRF, ನೇವಿ, ಪೊಲೀಸರು, ಅಗ್ನಿಶಾಮಕ ದಳ ಎಲ್ಲರು ಸ್ಥಳದಲ್ಲಿ ಕೆಲಸ ಮಾಡ್ತಿದ್ದಾರೆ. ಗುಡ್ಡ ಕುಸಿತ ಅಗುತ್ತೆ ಅಂತ ಗೊತ್ತಿದ್ದರೂ ಕಳೆದ ವರ್ಷವೇ ನಾವು ಇದರ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ ಗುಡ್ಡ ಕುಸಿತ ತಡೆಗಟ್ಟುವ ಕೆಲಸ ಅವರು ಮಾಡಲಿಲ್ಲ. ನಿನ್ನೆಯೂ ಅವರು ತ್ವರಿತವಾಗಿ ರಾಷ್ಟ್ರೀಯ ಹೆದ್ದಾರಿಯವರು ಸ್ಪಂದಿಸಲಿಲ್ಲ. ಸ್ಥಳೀಯ ಶಾಸಕರು ರಾಷ್ಟ್ರೀಯ ಹೆದ್ದಾರಿಯವರು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ ಎಂದು ದೂರು ನೀಡಿದ್ದಾರೆ. ನಿನ್ನೆ ಸಂಜೆ IRB ಕಂಪನಿ ಮತ್ತು ನ್ಯಾಷನಲ್ ಹೈವೆ ಮೇಲೆ FIR ದಾಖಲು ಮಾಡಿದ್ದೇವೆ. ಈ ಪ್ರಕರಣಕ್ಕೆ ಅವರ ಬೇಜವಾಬ್ದಾರಿ, ಮೊಂಡುತನ ಕಾರಣ. ಕಳೆದ ವರ್ಷ ನಾನೇ ಸಭೆ ನಡೆಸಿ ಮುಖ್ಯ ಕಾರ್ಯದರ್ಶಿ ಮೂಲಕ ವರ್ತಮಾನ ಕೊಟ್ಟಿದ್ದೆವು. ಆದರು ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಈಗ ಮುಂಬೈನಿಂದ ಕಾರು ಕಂಪನಿಯೊಂದು ಫೋನ್ ಮಾಡಿ ಒಂದು ಜಿಪಿಎಸ್ ಗುಡ್ಡ ಕುಸಿತ ಜಾಗದಲ್ಲಿ ಸಿಕ್ಕಿ ಹಾಕಿಕೊಂಡಿದೆ ಅಂತ ಮಾಹಿತಿ ಕೊಟ್ಡಿದ್ದಾರೆ. ಒಂದು ಕಾರ್ ಕೂಡಾ ಸಿಕ್ಕಿ ಹಾಕಿಕೊಂಡಿರೋ ಸಾಧ್ಯತೆ ಇದೆ .ಅದರ ಪರಿಶೀಲನೆ ಆಗುತ್ತಿದೆ. ಕಾರು ಕಂಪನಿಗೆ ಮಾಲೀಕರು ಯಾರುಎನ್ನುವ ಮಾಹಿತಿ ಕೇಳಿದ್ದೇನೆ ಅಂತ ತಿಳಿಸಿದರು.