ನವದೆಹಲಿ: ಬೆಂಗಳೂರಿನಲ್ಲಿ (Bengaluru) ಮಳೆ (Rain) ಪ್ರವಾಹ ಪರಿಸ್ಥಿತಿ ಸುಧಾರಿಸದ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾದ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ (Government) ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ದುಬಾರಿ ದಂಡ ವಿಧಿಸಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎನ್‍ಜಿಟಿ (The National Green Tribunal) ಒಟ್ಟು 3,400 ಕೋಟಿ ಪರಿಸರ ಪರಿಹಾರ ನೀಡಲು ಸೂಚಿಸಿದೆ.
Advertisement
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಮುಳುಗಡೆಯಾಗಿದ್ದವು ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು, ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ದೂರು ದಾಖಲಿಸಿಕೊಂಡಿದ್ದ ಎನ್‍ಜಿಟಿ ಈ ಬಗ್ಗೆ ವಿಚಾರಣೆ ನಡೆಸಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ. ಇದನ್ನೂ ಓದಿ: ಎತ್ತು ಏರಿಗೆಳೀತು ಕೋಣ ನೀರಿಗಿಳೀತು: ಬಿಜೆಪಿ ವ್ಯಂಗ್ಯ
Advertisement
Advertisement
ಹೊಸೂರ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಮಳೆ ನೀರಿನಿಂದ ಸಮಸ್ಯೆ ಸೃಷ್ಟಿಯಾಗಿದೆ. ಇದಕ್ಕೆ ಅಧಿಕಾರಿಗಳ ನಿಷ್ಕ್ರಿಯತೆ, ಜಟಿಲತೆ ಕಾರಣ, ಚಂದಾಪುರ ಕೆರೆಗೂ ಅಪಾರ ಹಾನಿ ಉಂಟಾಗಿದೆ. ಆ ಭಾಗದ ಕೆರೆಗಳ ಒತ್ತುವರಿಯಿಂದ ಪ್ರವಾಹವಾಗಿದೆ. ಈ ಎಲ್ಲ ಬೆಳವಣಿಗೆಗೂ ರಾಜ್ಯ ಸರ್ಕಾರವೇ ನೇರ ಹೊಣೆ ನಾಗರಿಕರಿಗೆ ಸ್ವಚ್ಛ ಪರಿಸರವನ್ನು ಒದಗಿಸಲು ವಿಫಲವಾದ ಕಾರಣಕ್ಕಾಗಿ 500 ಕೋಟಿ ರೂ. ಪರಿಸರ ಪರಿಹಾರವಾಗಿ ಸರ್ಕಾರ ಪಾವತಿಸಬೇಕು. ಈ ಹಣವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿಡಬಹುದು, ಇದನ್ನು ಆರು ತಿಂಗಳಲ್ಲಿ ಮುಳುಗಡೆ ಪ್ರದೇಶದ ಪುನರ್ವಸತಿಗೆ ಬಳಸಿಕೊಳ್ಳಬಹುದು ಎಂದು ನಿರ್ದೇಶನ ನೀಡಿದೆ. ಇದನ್ನೂ ಓದಿ: ನಟ ನರೇಶ್ ಅವರಿಂದ ಪವಿತ್ರಾ ಲೋಕೇಶ್ ಕೂಡ ದೂರ ದೂರ
Advertisement
ಮತ್ತೊಂದು ಪ್ರಕರಣದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ ವಿಫಲ ಹಿನ್ನೆಲೆ 2,900 ಕೋಟಿ ರೂ ದಂಡ (ಪರಿಸರ ಪರಿಹಾರ) ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಧಿಕರಣ ಆದೇಶ ಮಾಡಿದೆ. ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ಘನ, ದ್ರವ ತ್ಯಾಜ್ಯದ ನಿರ್ವಹಣೆ ಸರಿಯಾಗಿಲ್ಲ, ಕಳೆದ ಐದು ವರ್ಷಗಳಿಂದ ನಿರ್ವಹಣೆಯಲ್ಲಿ ಸ್ಪಷ್ಟ ಫಲಿತಾಂಶ ಬಂದಿಲ್ಲ. ಹಾನಿಯನ್ನು ಭವಿಷ್ಯದಲ್ಲಿ ತಡೆಗಟ್ಟುವ ಅಗತ್ಯವಿದೆ ಹಿಂದಿನ ಹಾನಿಯನ್ನು ಮರುಸ್ಥಾಪಿಸಬೇಕಾಗಿದೆ ಈ ಹಿನ್ನೆಲೆ ಎನ್‍ಜಿಟಿ ಕಾಯಿದೆಯ ಸೆಕ್ಷನ್ 15ರ ಅಡಿಯಲ್ಲಿ 2,900 ಕೋಟಿ ರೂ. ಪರಿಹಾರ ನೀಡುವಂತೆ ಎನ್‍ಜಿಟಿ ಆದೇಶಿಸಿದೆ. ಈ ಹಿಂದೆ ಪಂಜಾಬ್ (Punjab) ಸರ್ಕಾರಕ್ಕೆ 2,000 ಕೋಟಿ, ರಾಜಸ್ಥಾನ (Rajasthan) ಸರ್ಕಾರಕ್ಕೆ 3,000 ಕೋಟಿ ದಂಡ ವಿಧಿಸಿಸಲಾಗಿತ್ತು.