ಹುಬ್ಬಳ್ಳಿ: ರಾಜ್ಯಾದ್ಯಂತ ಸದ್ಯ ಬಿಟ್ ಕಾಯಿನ್ ದಂಧೆ ಚರ್ಚೆಯಲ್ಲಿದೆ. ಇದರ ನಡುವೆಯೇ ನೆಕ್ಸ್ ಕಾಯಿನ್ ಟ್ರೇಡಿಂಗ್ ಹೆಸರಲ್ಲಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರ ಖಾತೆಯಿಂದ 8.13 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
Advertisement
ಇಲ್ಲಿನ ಜಯನಗರ ನಿವಾಸಿ ಪ್ರಕಾಶ ಲಕಮನಹಳ್ಳಿ ವಂಚನೆಗೀಡಾದವರು. ವ್ಯಕ್ತಿಯೊಬ್ಬ ಪ್ರಕಾಶ ಅವರನ್ನು ‘ನೆಕ್ಸ್ ಇನ್‌ವೆಸ್ಟಮೆಂಟ್ 123 ‘ ಎಂಬ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರಿಸಿದ್ದರು. ಆದರೆ, ಪ್ರಕಾಶ ಅವರು ಗ್ರುಪ್‌ನಿಂದ ಹೊರಗೆ ಹೋಗಿದ್ದರು. ಮತ್ತೊಂದು ನಂಬರ್ ಮೂಲಕ ಬೇರೊಬ್ಬರು ಕರೆ ಮಾಡಿ, ತಾವು ಫ್ಯಾಷನ್ ಡಿಸೈನರ್ ಎಂದು ಹೇಳಿಕೊಂಡಿದ್ದರು. ನೆಕ್ಸ್ ಕಾಯಿನ್‌ನಲ್ಲಿ ಹೂಡಿಕೆಯಿಂದ ತಾವು ಲಾಭ ಪಡೆದಿರುವುದಾಗಿ ನಂಬಿಸಿದ್ದರು. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ
Advertisement
Advertisement
ಬಳಿಕ m.nexcoin.vip ವೆಬ್‌ಸೈಟ್ ಲಿಂಕ್ ಕಳುಹಿಸಿದ್ದರು. ಆ ಲಿಂಕ್ ಕ್ಲಿಕ್ ಮಾಡಿ ಹೆಸರು ವಿಳಾಸ, ಇ – ಮೇಲ್ ಐಡಿ, ಆಧಾರ್ ಕಾರ್ಡ್, ಫೋಟೋ ಹಾಕಿಸಿಕೊಂಡಿದ್ದರು. ಬಳಿಕ ಬ್ಯಾಂಕ್ ಖಾತೆ ಮೂಲಕ ಹಣ ಹೂಡಿಕೆ ಮಾಡಿ, ನಿಮ್ಮ ಹಣವನ್ನು ಡಾಲರ್ ರೂಪದಲ್ಲಿ ಪರಿವರ್ತಿಸಿ ನಿಮ್ಮ ಪರವಾಗಿ ನೆಕ್ಸ್ ಕಾಯಿನ್‌ನಲ್ಲಿ ಹೂಡಿಕೆ ಮಾಡುತ್ತೇವೆ. ಬಂದ ಲಾಭವನ್ನು ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ. ಅದರಲ್ಲಿ ನಮಗೆ ಶೇ.20 ರಷ್ಟು ಕಮಿಷನ್ ಕೊಡಿ ಎಂದು ನಂಬಿಸಿದ್ದರು. ಇದನ್ನೂ ಓದಿ: ಎರಡು ಮಿಲಿಯನ್‍ಗೂ ಹೆಚ್ಚಿನ ವೀಕ್ಷಣೆ ಕಂಡ ‘100’ ಸಿನಿಮಾದ ಥ್ರಿಲ್ಲಿಂಗ್ ಟ್ರೇಲರ್
Advertisement
ಹಂತ ಹಂತವಾಗಿ ಹಣ ಹೂಡಿಕೆ ಮಾಡಿಕೊಂಡು ಲಾಭ-ನಷ್ಟ ತೋರಿಸುತ್ತಿದ್ದರು. ಹಣ ಬಿಡಿಸಿಕೊಳ್ಳಲು ಮುಂದಾದಾಗ ಹಣ ಫೀಜ್ ಆಗಿದೆ ಎಂದು ವಂಚಿಸಿದ್ದಾರೆಂದು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.