ಬೆಂಗಳೂರು: ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಡಿ.10ರಂದು ಚುನಾವಣೆ ನಡೆಯಲಿದೆ.
ಅಂದು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿ.14ರಂದು ಮತ ಎಣಿಕೆ ಆಗಲಿದೆ.
Advertisement
Advertisement
25 ಪರಿಷತ್ ಸದಸ್ಯರ ಅಧಿಕಾರದ ಅವಧಿ ಜನವರಿ 5ಕ್ಕೆ ಮುಕ್ತಾಯಗೊಳ್ಳಲಿದೆ. ಬೀದರ್ 01, ಕಲಬುರಗಿ 01, ವಿಜಯಪುರ 02, ಬೆಳಗಾವಿ 02, ಉತ್ತರ ಕನ್ನಡ 01, ಧಾರವಾಡ 02, ರಾಯಚೂರು 01, ಬಳ್ಳಾರಿ 01, ಚಿತ್ರದುರ್ಗ 01, ಶಿವಮೊಗ್ಗ 01, ದಕ್ಷಿಣ ಕನ್ನಡ 02, ಚಿಕ್ಕಮಗಳೂರು 01, ಹಾಸನ 01, ತುಮಕೂರು 01, ಮಂಡ್ಯ 01, ಬೆಂಗಳೂರು 01, ಬೆಂಗಳೂರು ಗ್ರಾಮಾಂತರ 01, ಕೋಲಾರ 01, ಕೊಡಗು 01, ಮೈಸೂರಿನ 02 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ
Advertisement
ಚುನಾವಣೆಗೆ ಸಂಬಂಧಿಸಿದಂತೆ ನವೆಂಬರ್ 16 ಕ್ಕೆ ಅಧಿಸೂಚನೆ ಹೊರಡಿಸಲಾಗುವುದು. ನ.23ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿಸೆಂಬರ್ 10ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಇದನ್ನೂ ಓದಿ: ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ
Advertisement
ತೆರವಾಗುತ್ತಿರುವ 25 ಎಂಎಲ್‌ಸಿ ಸ್ಥಾನಗಳ ವಿವರ
ಬಿಜೆಪಿಯ-6
ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ-1
ಕಾಂಗ್ರೆಸ್-13