ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ – ಭಾರತಕ್ಕೆ ಹೀನಾಯ ಸೋಲು

Public TV
2 Min Read
virt kohli sad

– 7 ವಿಕೆಟ್‍ಗಳಿಂದ ಪಂದ್ಯ ಗೆದ್ದ ನ್ಯೂಜಿಲೆಂಡ್
– ಏಕದಿನದ ಜೊತೆ ಟೆಸ್ಟ್ ಕ್ಲೀನ್ ಸ್ವೀಪ್

ಕ್ರೈಸ್ಟ್ ಚರ್ಚ್: ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. 7 ವಿಕೆಟ್ ಗಳಿಂದ ಪಂದ್ಯವನ್ನು ಗೆಲ್ಲುವುದರ ಜೊತೆಗೆ ನ್ಯೂಜಿಲೆಂಡ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಭಾರತದ ಕೆಟ್ಟ ಪ್ರದರ್ಶನಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

90 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು 34 ರನ್ ಮಾತ್ರ ಪೇರಿಸಿ 46 ಓವರ್ ಗಳಲ್ಲಿ 124 ರನ್ ಗಳಿಗೆ ಆಲೌಟ್ ಆಯ್ತು. 132 ರನ್ ಗಳ ಸುಲಭದ ಗುರಿಯನ್ನು ಬೆನ್ನಟ್ಟಿದ್ದ ನ್ಯೂಜಿಲೆಂಡ್ 32.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿತು.

ನ್ಯೂಜಿಲೆಂಡ್ ಪರವಾಗಿ ಆರಂಭಿಕ ಆಟಗಾರರಾದ ಟಾಮ್ ಲಾಥಮ್ ಮತ್ತು ಟಾಮ್ ಬ್ಲುಂಡೆಲ್ ಮೊದಲ ವಿಕೆಟಿಗೆ 28 ಓವರ್ ಗಳಲ್ಲಿ 103 ರನ್ ಜೊತೆಯಾಟವಾಡಿದರು. ಟಾಮ್ ಲಾಥಮ್ 52(74 ಎಸೆತ, 10 ಬೌಂಡರಿ) ಹೊಡೆದರೆ ಬ್ಲುಂಡೆಲ್ 55 ರನ್(113 ಎಸೆತ, 8 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

ಎರಡನೇ ಇನ್ನಿಂಗ್ಸ್ ನಲ್ಲಿ ವೇಗದ ಬೌಲರ್ ಗಳಾದ ಟ್ರೆಂಟ್ ಬೌಲ್ಟ್ 4 ವಿಕೆಟ್ ಪಡೆದರೆ, ಟಿಮ್ ಸೌಥಿ 3 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಪರಿಣಾಮ ನ್ಯೂಜಿಲೆಂಡ್ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಮೂರನೇ ದಿನ ಭಾರತದ ಪರ ರವೀಂದ್ರ ಜಡೇಜಾ ಔಟಾಗದೇ 16 ರನ್(22 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿಸಿದರು.

ನ್ಯೂಜಿಲೆಂಡ್ ಸರಣಿಯ ವಿಶೇಷ ಏನೆಂದರೆ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಗೈದರೆ, 3 ಪಂದ್ಯಗಳ ಏಕದಿನ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ಕ್ಲೀನ್ ಸ್ವೀಪ್ ಮಾಡಿಕೊಂಡು ಗೆದ್ದಿದೆ.

ಸಂಕ್ಷೀಪ್ತ ಸ್ಕೋರ್
ಭಾರತ – 242 ಮತ್ತು 124
ನ್ಯೂಜಿಲೆಂಡ್ -235 ಮತ್ತು 132/2

https://twitter.com/nishant4_king/status/1233959613952692224

Share This Article
Leave a Comment

Leave a Reply

Your email address will not be published. Required fields are marked *