6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ರೈಲ್ವೆ ಟ್ರ‍್ಯಾಕ್‌ನಲ್ಲಿ ಶವವಾಗಿ ಪತ್ತೆ

Public TV
1 Min Read
Hassan Suspect Death

ಹಾಸನ: ಮದುವೆಯಾದ ಆರು ತಿಂಗಳಲ್ಲೇ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ಮೃತಳನ್ನು ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ವಿದ್ಯಾ ಎನ್ನಲಾಗಿದ್ದು, ಸೋಮಲಾಪುರ ಗ್ರಾಮದ ಶಿವು ಎಂಬುವವರ ಜೊತೆ ವಿವಾಹವಾಗಿದ್ದರು. ಪತಿ ಶಿವು ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಬೆಂಗಳೂರಿನ ಶಂಕರಪುರಂನಲ್ಲಿ ವಾಸವಾಗಿದ್ದರು.ಇದನ್ನೂ ಓದಿ: 5 ವರ್ಷ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ: ಸಿದ್ದರಾಮಯ್ಯ

ಜೂ.30ರಂದು ವಿದ್ಯಾ ಕಾಣೆಯಾಗಿದ್ದರು. ಈ ಕುರಿತು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಮಂಗಳವಾರ ಸಂಜೆ ಅರಸೀಕೆರೆ ರೈಲ್ವೆ (Arsikere Railway Station) ಟ್ರ‍್ಯಾಕ್ ಬಳಿ ವಿದ್ಯಾ ಶವವಾಗಿ ಪತ್ತೆಯಾಗಿದ್ದಾರೆ.

ಮದುವೆಯಾದ ಆರಂಭದಿಂದಲೂ ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಇದೀಗ ಮಗಳನ್ನು ಅವರೇ ಹತ್ಯೆ ಮಾಡಿದ್ದಾರೆ ಎಂದು ಮೃತ ವಿದ್ಯಾಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಸದ್ಯ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ‘ಅಣ್ಣಾವ್ರು ಮನೆದೇವ್ರು… ಅಪ್ಪು ನಮ್ಮನೆ ಮಗ’ ಎಂದ ಯಶ್ ಅಮ್ಮ

Share This Article