ಗಾಂಧಿನಗರ: ನವದಂಪತಿ ಮದುವೆಯ ಮಧುರ ಮೊದಲ ರಾತ್ರಿಯನ್ನು ಲಾಕಪ್‍ನಲ್ಲಿ ಕಳೆದಿರುವ ಘಟನೆ ಗುಜರಾತ್‍ನ ವಲ್ಸಾದ್ ನಗರದಲ್ಲಿ ನಡೆದಿದೆ.
Advertisement
ಮದುವೆ ಮುಗಿಸಿಕೊಂಡು ನವದಂಪತಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಅವರ ಜೊತೆ ಕುಟುಂಬದ ಇತರ ಸದಸ್ಯರೂ ಇದ್ದರು. ಆದರೆ ಮಾರ್ಗಮಧ್ಯೆ ಪೊಲೀಸರು ಅವರ ಕಾರನ್ನು ನಿಲ್ಲಿಸಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲನೆ ಕುರಿತಾಗಿ ತಪಾಸಣೆ ನಡೆಸಲಾಗಿದೆ. ಕೊರೊನಾ ನಿಯಮ ಉಲ್ಲಂಘನೆ ಗಮನಕ್ಕೆ ಬಂದಿದ್ದು, ಕೊರೊನಾ ನಿಯಮಾವಳಿ ಪಾಲಿಸದ ಕಾರಣ ಪೊಲೀಸರು ನವದಂಪತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ
Advertisement
Advertisement
ದಂಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾಕಪ್‍ಗೆ ಹಾಕಿದ್ದಾರೆ. ಹೀಗಾಗಿ ಮದುವೆಯ ಮೊದಲ ರಾತ್ರಿಯನ್ನು ಪತಿ-ಪತ್ನಿ ಇಬ್ಬರೂ ಲಾಕಪ್‍ನಲ್ಲಿ ಕಳೆಯಬೇಕಾಯಿತು. ಮರುದಿನ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ಪೊಲಿಸರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಕಾರು ತಪಾಸಣೆ ವೇಳೆ ವರ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲದೆ ತಮ್ಮೊಡನೆ ಅನುಚಿತವಾಗಿ ನಡೆದುಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ