ಮಂಗಳೂರು: ಮದುವೆ ಸಮಾರಂಭಗಳಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದ್ದು, ಮಂಗಳೂರಿನಲ್ಲಿ ನೂತನ ದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಇಂದು ನಡೆದ ಮದುವೆ ಎಲ್ಲರ ಗಮನ ಸೆಳೆಯಿತು. ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ ಎಂಬವರ ವಿವಾಹವು ಪುಣಚದ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ದಂಪತಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧ ಹಾಗೂ ಅನೇಕ ಮರದ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!
Advertisement
ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ದೃಷ್ಠಿಯಿಂದ ದಂಪತಿಯು ಈ ಯೋಜನೆಯನ್ನು ಹಾಕಿಕೊಂಡಿದ್ದರು. ಈ ವೇಳೆ ಅತಿಥಿಗಳಿಗೆ ಗಿಡಗಳನ್ನು ಕೊಟ್ಟು ಪೋಷಿಸಲು ಪ್ರೇರೆಪಿಸಿದ್ದಾರೆ. ಇವರ ಈ ಕಾರ್ಯವು ಪರಿಸರ ರಕ್ಷಣೆಗೆ ಮಾದರಿಯಾಗಿದೆ. ಮದುವೆಗೆ ಬಂದ ಸಾವಿರಾರು ಅತಿಥಿಗಳು ಗಿಡಗಳನ್ನು ಹೊತ್ತೊಯ್ದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ