ತಿರುವನಂತಪುರಂ: ಸಂಬಂಧಿಕರ ಮನೆಗೆ ಫೋಟೋಶೂಟ್ (Photoshoot) ವೇಳೆ ನೂತನ ವಧು-ವರ (Bride- Groom) ಸೇರಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.
ತಿರುವನಂತಪುರಂನಲ್ಲಿರುವ ಪಲ್ಲಿಕಲ್ ನದಿಯಲ್ಲಿ (Pallikal River) ಈ ಅವಘಡ ಸಂಭವಿಸಿದೆ. ನೂತನ ವಧು-ವರ ಬಂಡೆ ಮೇಲೆ ನಿಂತು ಫೋಟೋಶೂಟ್ ಮಾಡಿಸುತ್ತಿದ್ದರು. ಈ ವೇಳೆ ಆಯತಪ್ಪಿ ಇಬ್ಬರೂ ನೀರಿಗೆ ಬಿದ್ದಿದ್ದಾರೆ. ಇವರಿಬ್ಬರನ್ನು ರಕ್ಷಿಸಲು ಸಂಬಂಧಿಕರೊಬ್ಬರು ನೀರಿಗೆ ಹಾರಿದ್ದು, ಅವರು ಕೂಡ ದಾರುಣವಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಸ್ ಡೋರ್ ಮುರಿದ ನಾರಿಶಕ್ತಿ
ಮೃತರನ್ನು ಸಿದ್ದಿಕ್, ನೌಫಿ ಹಾಗೂ ಅನ್ಸಿಲ್ ಎಂದು ಗುರುತಿಸಲಾಗಿದೆ. ಇವರೆಲ್ಲ ಕೊಲ್ಲಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ವೇಳೆ ಸಂಂಬಧಿಕರ ಮೃತದೇಹ ಪತ್ತೆಯಾಯಿತು. ಇನ್ನು ಘಟನೆ ನಡೆದ ಒಂದು ದಿನದ ಬಳಿಕ ವಧು ಹಾಗೂ ವರನ ಶವ ಪತ್ತೆಯಾಗಿದೆ. ನಂತರ ಮೂವರ ಮೃತದೇಹವನ್ನು ಕೊಲ್ಲಂ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ವಧು ಹಾಗೂ ವರ ನೀರಿಗೆ ಬೀಳುತ್ತಿದ್ದಂತೆಯೇ ಅವರ ರಕ್ಷಣೆ ಮಾಡುವ ಸಲುವಾಗಿ ಅನ್ಸಿಲ್ ನೀರಿಗೆ ಧುಮುಕಿದ್ದಾರೆ. ಆದರೆ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಾರದ ಹಿಂದೆಯಷ್ಟೇ ಜೋಡಿಗೆ ಮದುವೆಯಾಗಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಅವರು ಅನ್ಸಿಲ್ ಮನೆಗೆ ಬಂದಿದ್ದರು. ಅಂತೆಯೇ ಮೂವರು ಅನ್ಸಿಲ್ ಮನೆ ಪಕ್ಕದಲ್ಲಿರುವ ನದಿ ಬದಿಗೆ ಫೋಟೋಶೂಟ್‍ಗಾಗಿ ತೆರಳಿದ್ದರು. ಈ ವೇಳೆ ಬಂಡೆ ಮೇಲಿನಿಂದ ಆಯತಪ್ಪಿ ನದಿಗೆ ಬಿದ್ದಿದ್ದಾರೆ.
Web Stories