ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಬಳಿ ಕೇವಲ ನಾಲ್ಕು ತಿಂಗಳ ಹಿಂದೆ ನಿರ್ಮಿಸಿದ್ದ ಸೇತುವೆ ಈಗ ಮುರಿದು ಬೀಳುವ ಹಂತದಲ್ಲಿದೆ.
ಚಿಕ್ಕೋಡಿ ಹಾಗೂ ಬೆಳಕೂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಬಿರುಕು ಕಾಣಿಸಿದ್ದು ಗ್ರಾಮಸ್ಥರು ಓಡಾಡೋಕೆ ಹೆದರುತ್ತಿದ್ದಾರೆ. ಈ ಸೇತುವೆ ನಿರ್ಮಾಣಕ್ಕೂ ಮುನ್ನ ಸೇತುವೆ ಚಿಕ್ಕದಾಗಿತ್ತು. ಜೊತೆಗೆ ನೀರು ಬಂದ್ರೆ ಸೇತುವೆ ಮುಳುಗಿ ಹೋಗ್ತಿತ್ತು. ಬಳಿಕ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಬಣ್ಣ ನಾಲ್ಕೇ ತಿಂಗಳಲ್ಲಿ ಬಯಲಾಗಿದೆ.
Advertisement
Advertisement
ಈ ಮಾರ್ಗವಾಗಿ ಹತ್ತಾರು ಭಾರೀ ವಾಹನಗಳು, ಸಾರಿಗೆ ಇಲಾಖೆಯ ಬಸ್‍ಗಳು ಸಾಗುತ್ತವೆ. ಹೀಗಾಗಿ ಏನಾದ್ರೂ ಅನಾಹುತ ಆಗುತ್ತೆ ಅನ್ನೋ ಭಯದಲ್ಲಿ ಗ್ರಾಮಸ್ಥರು ಇದ್ದಾರೆ.
Advertisement
Advertisement
ಇದು ರಾಯಭಾಗ ಕ್ಷೇತ್ರಕ್ಕೆ ಸೇರಿದ್ದು, ಬಿಜೆಪಿ ಶಾಸಕ ದುಯೋರ್ಧನ ಐಹೊಳೆಯವರಿಗೆ ಕೇಳಿದ್ರೆ ಈ ಸೇತುವೆ ಕಾಮಗಾರಿಗೆ ಕೊಟ್ಟಿದ್ದ ಟೆಂಡರ್‍ನಲ್ಲಿ ಕೇವಲ ಸೇತುವೆ ನಿರ್ಮಾಣ ಪ್ರಸ್ತಾವನೆ ಮಾತ್ರ ಸಲ್ಲಿಸಲಾಗಿತ್ತು. ಈಗ ರಸ್ತೆ ಕಾಮಗಾರಿಗಾಗಿ ಬೇರೆ ಟೆಂಡರ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತ ಹೇಳ್ತಾರೆ.
ಇದನ್ನು ನೋಡಿದ್ರೆ ಡಬಲ್ ಟೆಂಡರ್ ಕರೆದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಣ ನುಂಗುವ ತಂತ್ರ ಮಾಡಿದ್ದಾರಾ? ಅಂತ ಅನುಮಾನ ಮೂಡ್ತಿದೆ.