ನವದೆಹಲಿ: ಬಟ್ಟೆ ವ್ಯಾಪಾರಿಯೊಬ್ಬ ಅಶ್ಲೀಲ ವೀಡಿಯೋ ಬ್ಲ್ಯಾಕ್‍ಮೆಲ್ ಮಾಡುತ್ತಿದ್ದ ತನ್ನ ಉದ್ಯೋಗಿಯನ್ನು ಕೊಂದು ಶವವನ್ನು ಟ್ರಾಲಿ ಬ್ಯಾಗ್‍ನಲ್ಲಿಟ್ಟಿದ್ದ ಘಟನೆ ದಕ್ಷಿಣ ದೆಹಲಿಯ ಸರೋಜಿನಿ ನಗರದಲ್ಲಿ ನಡೆದಿದೆ.
ಸಲಿಂಗಕಾಮಿಗಳಿಬ್ಬರು ಲೈಂಗಿಕ ಸಂಬಂಧದಲ್ಲಿ ತೊಡಗಿಕೊಂಡಿದ್ದರು. ಈ ವೀಡಿಯೋವನ್ನು ಮಾಡಿಕೊಂಡಿದ್ದ 22 ವರ್ಷದ ಉದ್ಯೋಗಿಯು 36 ವರ್ಷದ ಬಟ್ಟೆ ವ್ಯಾಪಾರಿಯನ್ನು ಹೆದರಿಸುತ್ತಿದ್ದ. ಜೊತೆಗೆ ಹಣ ನೀಡುವಂತೆ ಒತ್ತಡ ಹೇರುತ್ತಿದ್ದ. ಹಣ ನೀಡದಿದ್ದರೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ವ್ಯಾಪಾರಿಗೆ ಬೆದರಿಕೆ ಹಾಕುತ್ತಿದ್ದ.
ಈ ಹಿನ್ನೆಲೆಯಲ್ಲಿ ಬಟ್ಟೆ ವ್ಯಾಪಾರಿಯು ಆತನನ್ನು ಕೊಲೆ ಮಾಡಲು ಯೋಜನೆಯನ್ನು ರೂಪಿಸಿದ. ಜೊತೆಗೆ ಉತ್ತರ ಪ್ರದೇಶದಲ್ಲಿರುವ ಹಳ್ಳಿಯೊಂದರಲ್ಲಿ ವಾಸಿಸುವ ತನ್ನ ಸೋದರಳಿಯನನ್ನು ಜ.28ರಿಂದು ದೆಹಲಿಗೆ ಕರೆಸಿಕೊಂಡು ಸರೋಜಿನಿ ನಗರದಿಂದ 3ಕಿ.ಮೀ ದೂರದಲ್ಲಿರುವ ದಕ್ಷಿಣ ದೆಹಲಿಯ ಯೂಸುಫ್ ಸರಾಯ್‍ನಲ್ಲಿರುವ ಹೋಟೆಲ್‍ನಲ್ಲಿ ತಂಗಿದ್ದರು.
ನಂತರ ಆ ಯುವಕನನ್ನು ಯಾವುದೋ ಕೆಲಸಕ್ಕಾಗಿ ಹೊಟೆಲ್‍ಗೆ ಕರೆಸಿಕೊಂಡರು. ನಂತರ ಆತನನ್ನು ಹಗ್ಗದಿಂದ ಕಟ್ಟಿ ಕೊಲೆ ಮಾಡಿದರು. ಆ ಶವವನ್ನು ಟ್ರಾಲಿ ಬ್ಯಾಗ್‍ನಲ್ಲಿ ಹಾಕಿಟ್ಟು ಸರೋಜಿನಿ ನಗರದ ಮೆಟ್ರೋ ನಿಲ್ದಾಣದ ಹೊರಗೆ ಇಟ್ಟುಹೋಗಿದ್ದರು. ಆರೋಪಿಗಳು ದೊಡ್ಡ ಟ್ರಾಲಿ ಬ್ಯಾಗ್ ಅನ್ನು ಹೊತ್ತೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ
ಈ ಸಂಬಂಧ ಬಟ್ಟೆ ವ್ಯಾಪಾರಿಯನ್ನು ಹಾಗೂ ಕೊಲೆಗೆ ಸಹಕರಿಸಿದ ಉದ್ಯಮಿಯ ಸೋದರಳಿಯ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬರೀ ಎರಡೇ ಅಲ್ಲ, ಮೂರು ಗುಂಪುಗಳಿವೆ: ಕಾರಜೋಳ