ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತನ್ನ ಗೆಳೆಯನಿಂದ ಭೀಕರವಾಗಿ ಕೊಲೆಯಾಗಿದ್ದ ಶ್ರದ್ಧಾ ವಾಕರ್‌ಳ ಪರಿಸ್ಥಿತಿ ಬಗ್ಗೆ ಆಕೆಯ ಸ್ನೇಹಿತ (Friend) ತಿಳಿಸಿದ್ದಾನೆ.
ಹೌದು.. ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಕ್ರೂರತೆಯನ್ನು ಮೊದಲೇ ಶ್ರದ್ಧಾ(27) ತನ್ನ ಸ್ನೇಹಿತ ಲಕ್ಷ್ಮಣ್ ನಾಡಾರ್ ಜೊತೆ ಹೇಳಿಕೊಂಡಿದ್ದಳಂತೆ. ಈ ಬಗ್ಗೆ ಮಾತನಾಡಿರುವ ಲಕ್ಷ್ಮಣ್, ಶ್ರದ್ಧಾ ಹಾಗೂ ಅಫ್ತಾಬ್ ನಡುವೆ ಆಗಾಗ ಅನೇಕ ಜಗಳಗಳು ಹಾಗೂ ವಾದಗಳು ನಡೆಯುತ್ತಿದ್ದವು. ಒಮ್ಮೆ ಆಕೆ ನನ್ನನ್ನು ವಾಟ್ಸಪ್ ಮೂಲಕ ಸಂಪರ್ಕಿಸಿದ್ದಳು. ಅಷ್ಟೇ ಅಲ್ಲದೇ ಆಕೆ ಆ ರಾತ್ರಿ ಅವನೊಂದಿಗೆ ತಾನು ಇಲ್ಲೇ ಉಳಿದುಕೊಂಡರೆ ಆತ ತನ್ನನ್ನು ಕೊಲ್ಲುತ್ತಾನೆ. ದಯವಿಟ್ಟು ತನ್ನನ್ನು ಅವನ ನಿವಾಸದಿಂದ ರಕ್ಷಿಸುವಂತೆ ಬೇಡಿಕೊಂಡಿದ್ದಳು ಎಂದು ಮಾಹಿತಿ ನೀಡಿದರು.
Advertisement
Advertisement
ಅದಾದ ಬಳಿಕ ಸ್ನೇಹಿತರೊಂದಿಗೆ ಸೇರಿ ಶ್ರದ್ಧಾಳನ್ನು ಛತ್ತರ್‍ಪುರದ ಆತನ ನಿವಾಸದಿಂದ ರಕ್ಷಿಸಿದ್ದೆವು. ಅಷ್ಟೇ ಅಲ್ಲದೇ ಘಟನೆಗೆ ಸಂಬಂಧಿಸಿ ಪೊಲೀಸರನ್ನು ಸಂಪರ್ಕಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಶ್ರದ್ಧಾ ಆಫಾಬ್‍ನನ್ನು ಪ್ರೀತಿಸುತ್ತಿದ್ದರಿಂದ ಪೊಲೀಸರಿಗೆ ತಿಳಿಸಿರಲಿಲ್ಲ ಎಂದರು.
Advertisement
ಅದಾದ ಬಳಿಕ 2 ತಿಂಗಳು ಕಾಲ ಶ್ರದ್ಧಾ ಸಂಪರ್ಕಿಸುವುದನ್ನು ನಿಲ್ಲಿಸಿದ್ದಳು. ಅಷ್ಟೇ ಅಲ್ಲದೇ ನಾವು ಯಾವುದೇ ಕರೆ, ಮೆಸೆಜ್ ಮಾಡಿದ್ದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಇದರಿಂದ ನಮಗೆಲ್ಲ ಚಿಂತೆ ಆರಂಭವಾಗಿತ್ತು. ಅಷ್ಟೇ ಅಲ್ಲದೇ ನಾವು ಆಕೆಯನ್ನು ಹುಡುಕಲು ಅನೇಕ ಪ್ರಯತ್ನವನ್ನು ಪಟ್ಟೆವು. ಆದರೆ ಆಕೆ ಎಲ್ಲಿದ್ದಾಳೆ ಎನ್ನುವುದನ್ನು ನಮಗೆ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾವೂ ಬೇರೆ ದಾರಿ ಸಿಗದೇ ಆಕೆಯ ಸಹೋದರಿನಿಗೆ ವಿಷಯವನ್ನು ತಿಳಿಸಿದೆವು ಎಂದು ಹೇಳಿದರು.
Advertisement
ಈ ವೇಳೆ ಇದನ್ನು ತಿಳಿದ ಶ್ರದ್ಧಾ ತಂದೆ ವಿಕಾಸ್ ವಾಕರ್ ಮುಂಬೈ ಪೊಲೀಸರಿಗೆ ದೂರು ನೀಡಿದರು. ಅದಾದ ಬಳಿಕ ತನಿಖೆಯನ್ನು ಪೊಲೀಸರು ಅನೇಕ ಭಯಾನಕ ವಿಷಯವನ್ನು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಅಫ್ತಾಬ್ ಬಳಿ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಅದಾದ ನಂತರ ಇಬ್ಬರ ಸಂಬಂಧವು ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆಫ್ತಾಬ್, ಅಂತಿಮವಾಗಿ ಅವಳನ್ನು ಕೊಂದನು ಎಂದು ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!
ಘಟನೆಯೇನು?: ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ (Live in relationship) ಗೆಳತಿಯ (Girlfriend) ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‍ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್’ ಸ್ಫೂರ್ತಿ – ರೋಚಕ ಸತ್ಯ ಬಯಲು