ಭುವನೇಶ್ವರ್: ಚಂಡಮಾರುತ ಸಮಯದಲ್ಲಿ ಹುಟ್ಟಿದ್ದ ಹೆಣ್ಣು ಮಗುವಿಗೆ ದಂಪತಿ `ಫೋನಿ’ ಎಂದು ಹೆಸರಿಟ್ಟಿದ್ದಾರೆ.
ಒಡಿಶಾದ ಭುವನೇಶ್ವರ್ ನಲ್ಲಿ ಶುಕ್ರವಾರ 11.03ರ ಸುಮಾರಿಗೆ ರೈಲ್ವೇ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ. ಮಹಿಳೆ ರೈಲ್ವೆ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಚಂಡಮಾರುತಕ್ಕೆ ಫೋನಿ ಹೆಸರು ಬಂದಿದ್ದು ಹೇಗೆ?
Advertisement
ಮಾಧ್ಯಮ ಸಂಸ್ಥೆಯೊಂದು ವೈದ್ಯರ ಜೊತೆ ಇರುವ ಮಗುವಿನ ಫೋಟೋ ಹಾಕಿ ಟ್ವೀಟ್ ಮಾಡಿದೆ. “32 ವರ್ಷದ ಮಹಿಳೆ ಸುಮಾರು 11.03ಕ್ಕೆ ರೈಲ್ವೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ `ಫೋನಿ’ ಎಂದು ಹೆಸರಿಟ್ಟಿದ್ದಾರೆ. ಮಹಿಳೆ ರೈಲ್ವೆ ಸಿಬ್ಬಂದಿಯಾಗಿದ್ದು, ಸದ್ಯ ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ” ಎಂದು ಬರೆದುಕೊಂಡಿದೆ.
Advertisement
Bhubaneswar: A 32-year-old woman gave birth to a baby girl in Railway Hospital today at 11:03 AM. Baby has been named after the cyclonic storm, Fani. The woman is a railway employee, working as a helper at Coach Repair Workshop, Mancheswar. Both the mother&child are fine. #Odisha pic.twitter.com/xHGTkFPlAe
— ANI (@ANI) May 3, 2019
Advertisement
ಈ ಟ್ವೀಟ್‍ಗೆ ರೀ-ಟ್ವೀಟ್ ಮಾಡುವ ಮೂಲಕ ಹಲವು ಜನ ಮಗುವನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಕೆಲವರು ಮಗುವಿಗೆ ಫೋನಿ ಎಂದು ಹೆಸರು ಇಡಬಾರದಿತ್ತು. ಏಕೆಂದರೆ ಫೋನಿ ಎಂದರೆ ಹಾವು ಎಂದರ್ಥ ಎಂದು ಹೇಳಿ ರೀ-ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಚಂಡ ಮಾರುತಕ್ಕೆ ಒಡಿಶಾ ತತ್ತರ – 8 ಸಾವು, ಆಸ್ತಿ-ಪಾಸ್ತಿ ನಷ್ಟ ಲೆಕ್ಕಕ್ಕೇ ಸಿಗ್ತಿಲ್ಲ
Advertisement
ಪಶ್ಚಿಮ ಬಂಗಾಳದಲ್ಲೂ 100ರಿಂದ 110 ಕಿ.ಮೀ ವೇಗದಲ್ಲಿ ಫೋನಿ ಚಂಡಮಾರುತ ಅಪ್ಪಳಿಸಿದೆ. ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ್, ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ, ಜಾಗ್ರಾಂ, ಕೋಲ್ಕತ್ತಾದಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ. ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಬೆಳಗ್ಗೆ 11.30ರವರೆಗೆ ಅತ್ಯಂತ ಭೀಕರ ಸ್ಥಿತಿಯಲ್ಲಿರುವ ಫೋನಿ ಚಂಡಮಾರುತ, ರಾತ್ರಿ 11.30ರ ವೇಳೆಗೆ ತೀವ್ರ ಸ್ಥಿತಿಗೆ ತನ್ನ ಅಬ್ಬರವನ್ನ ತಗ್ಗಿಸಲಿದೆ ಎಂಬುದಾಗಿ ತಿಳಿದುಬಂದಿದೆ.