ಹಾವೇರಿ: ನರ್ಸ್ ವೇಷ ಧರಿಸಿ ಬಂದು ಒಂದು ದಿನದ ನವಜಾತ ಶಿಶುವನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ (Haveri) ಮಹಿಳಾ ಠಾಣಾ ಪೊಲೀಸರು ಮಗುವನ್ನು ಪತ್ತೆ ಹಚ್ಚಿದ್ದಾರೆ. ಶನಿವಾರ ಸಂಜೆ ಐದು ಗಂಟೆಯಿಂದ ಆರೂವರೆ ಗಂಟೆಯ ಸಮಯದಲ್ಲಿ, ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಅಜ್ಜಿಯನ್ನು ಯಾಮಾರಿಸಿ ಮಹಿಳೆ ಮಗುವಿನೊಂದಿಗೆ ಪರಾರಿಯಾಗಿದ್ದಳು.
ಒಂದು ದಿನದ ಹೆಣ್ಣು ಮಗು ನಾಪತ್ತೆ ಆಗಿದ್ದ ಹಿನ್ನೆಲೆ ಮಗುವಿನ ಅಜ್ಜ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಗುವನ್ನು ತೆಗೆದುಕೊಂಡು ಹೋದ ಮಹಿಳೆ ಮತ್ತು ಮಗುವಿನ ಚಹರೆ ಪಟ್ಟಿಯ ಆಧಾರದ ಮೇಲೆ ಮತ್ತು ಜಿಲ್ಲಾಸ್ಪತ್ರೆಯಲ್ಲಿನ (District Hospital) ಸಿಸಿಟಿವಿ (CCTV) ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆಗೆ ಇಳಿದ ಹಾವೇರಿ ಮಹಿಳಾ ಠಾಣಾ ಪೊಲೀಸರು ನಾಪತ್ತೆಯಾಗಿದ್ದ ಹಸುಗೂಸನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ಹೆತ್ತವರ ಮಡಿಲು ಸೇರುವಂತೆ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟೂರಿನ ಮಣ್ಣಲ್ಲಿ ಧ್ರುವನಾರಾಯಣ್ ಲೀನ – ರಾಜಕೀಯದ ಅಜಾತಶತ್ರು ಇನ್ನು ನೆನಪು ಮಾತ್ರ
Advertisement
Advertisement
ಮಗುವಿನೊಂದಿಗೆ ಪರಾರಿಯಾಗಿದ್ದ ಮಹಿಳೆ ತಾನು ಈ ಹಿಂದೆ ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾಳೆ. ಅಲ್ಲದೇ ನರ್ಸ್ ಡ್ರೆಸ್ ಹಾಕಿಕೊಂಡು ಮಗುವನ್ನು ತೆಗೆದುಕೊಂಡು ಹೋಗಿರುವುದಾಗಿಯೂ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ನರ್ಸ್ ವೇಷ ಧರಿಸಿ ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ
Advertisement
ತಾನು ಹಾವೇರಿ ನಗರದ ನಾಗೇನಮಟ್ಟಿ (Nagenammati) ನಿವಾಸಿಯಾಗಿದ್ದು, ಐದು ವರ್ಷಗಳಿಂದ ಮಕ್ಕಳಾಗದ ಕಾರಣ ಮಗುವನ್ನು ತೆಗೆದುಕೊಂಡು ಹೋಗಿದ್ದೆ. ಮಗು ನೋಡಿ ಆಸೆಯಾಯಿತು. ಮಗುವನ್ನು ಕಳ್ಳತನ ಮಾಡಿ ಮಣ್ಣು ತಿನ್ನುವ ಕೆಲಸ ಮಾಡಿಬಿಟ್ಟೆ. ಮಗು ಅಳುವುದನ್ನು ನೋಡಿ ರಾತ್ರಿಯೇ ಹೆತ್ತವರಿಗೆ ವಾಪಸ್ ಕೊಡಬೇಕು ಎಂದು ಬಂದೆ. ಆದರೆ ಧೈರ್ಯ ಸಾಕಾಗದ ಕಾರಣ ವಾಪಸ್ ಹೋದೆ ಎಂದು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾಳೆ. ಈ ಕುರಿತು ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಬೇಗ ತಲುಪಿ!
Advertisement
ಒಟ್ಟಿನಲ್ಲಿ ಪೊಲೀಸರ ಕಾರ್ಯಾಚರಣೆಯಿಂದ ನಾಪತ್ತೆಯಾಗಿದ್ದ ಮಗು ಕೆಲವೇ ಗಂಟೆಗಳಲ್ಲಿ ಮರಳಿ ತಾಯಿಯ ಮಡಿಲು ಸೇರಿದೆ. ಅಲ್ಪ ಸಮಯದಲ್ಲಿ ಮಗುವನ್ನು ಪತ್ತೆ ಮಾಡಿದ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಲಿಂಗಭೈರವಿ ದೇವಿಯ ಮೋರೆ ಹೋದ ಸಮಂತಾ