ನೇಪಿಯರ್: ಭಾರತ (India) ಹಾಗೂ ನ್ಯೂಜಿಲೆಂಡ್ (New Zealand) ನಡುವಿನ 3ನೇ ಟಿ20 ಪಂದ್ಯ ಮಳೆಯಿಂದಾಗಿ (Rain) ರೋಚಕ ಟೈನಲ್ಲಿ (Tied) ಅಂತ್ಯ ಕಂಡಿದೆ. ಈ ನಡುವೆ 2ನೇ ಟಿ20 ಪಂದ್ಯ ಗೆದ್ದಿದ್ದ ಭಾರತ ಟಿ20 ಸರಣಿ ಗೆದ್ದುಕೊಂಡಿದೆ.
Advertisement
161 ರನ್‍ಗಳ ಗುರಿ ಪಡೆದ ಭಾರತ ಆರಂಭಿಕ ಆಘಾತದ ನಡುವೆ 9 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 75 ರನ್ ಸಿಡಿಸಿತ್ತು. ಈ ವೇಳೆ ವರುಣನ ಆಗಮನವಾಯಿತು. ನಂತರ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ನೋಡಿದಾಗ ಪಂದ್ಯ ಟೈ ಆಗಿತ್ತು. ಇತ್ತ ಫಲಿತಾಂಶ ಕಾಣದೇ ಪಂದ್ಯ ರದ್ದಾದರೆ, ಭಾರತ 2ನೇ ಪಂದ್ಯ ಗೆದ್ದ ಕಾರಣ ಸರಣಿ ಗೆದ್ದಿದೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್
Advertisement
Advertisement
ಮೊದಲ ಪಂದ್ಯ ಒಂದೇ ಒಂದು ಎಸೆತ ಕಾಣದೆ ರದ್ದಾಗಿತ್ತು. ಎರಡನೇ ಟಿ20 ಪಂದ್ಯದಲ್ಲಿ ಭಾರತ 65 ರನ್‍ಗಳ ಭರ್ಜರಿ ಜಯ ದಾಖಲಿಸಿತ್ತು. ಮೂರನೇ ಟಿ20 ಪಂದ್ಯ ಟೈ ಕಂಡಿದೆ.
Advertisement
161 ರನ್‍ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಶಾನ್ ಕಿಶನ್ 10 ರನ್ (11 ಎಸೆತ, 1 ಬೌಂಡರಿ, 1 ಸಿಕ್ಸ್), ಪಂತ್ 11 ರನ್ (5 ಎಸೆತ, 2 ಬೌಂಡರಿ) ಸೂರ್ಯ ಕುಮಾರ್ ಯಾದವ್ 13 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಶ್ರೇಯಸ್ ಅಯ್ಯರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: 3ನೇ T20 ಪಂದ್ಯದಿಂದ ವಿಲಿಯಮ್ಸನ್ ಔಟ್ – ಕಳೆದ ಪಂದ್ಯದ ಹ್ಯಾಟ್ರಿಕ್ ವೀರನಿಗೆ ನಾಯಕತ್ವದ ಪಟ್ಟ
6.3 ಓವರ್‌ಗಳಲ್ಲಿ 60 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 30 ರನ್ (18 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ಚೇತರಿಕೆ ನೀಡಲು ಮುಂದಾದರು. 9ನೇ ಓವರ್ ವೇಳೆ ಭಾರತ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದಾಗ ಮಳೆ ಬಂದು ಪಂದ್ಯ ಸ್ಥಗಿತಗೊಳಿಸಲಾಯಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ ಟೈಗೊಂಡಿತು. ಈ ಮೂಲಕ 2ನೇ ಪಂದ್ಯ ಗೆದ್ದಿದ್ದ ಭಾರತ ತಂಡ 1-0 ಅಂತರದಲ್ಲಿ ಸರಣಿ ಗೆದ್ದಿತು.
ಈ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಈ ನಿರ್ಧಾರವನ್ನು ಆರಂಭದಲ್ಲೇ ಭಾರತ ಬೌಲರ್‌ಗಳು ತಲೆಕೆಳಗಾಗಿಸಿದರು. ನ್ಯೂಜಿಲೆಂಡ್‍ನ ಆರಂಭಿಕ ಆಟಗಾರ ಫಿನ್ ಆಲೆನ್ 3 ರನ್ (4 ಎಸೆತ) ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್‍ಗೆ ತೆರಳಿದರು. ಇನ್ನೋರ್ವ ಆರಂಭಿಕ ಡೆವೂನ್ ಕಾನ್ವೇ ಮಾತ್ರ ಎಚ್ಚರಿಕೆ ಆಟಕ್ಕೆ ಮೊರೆ ಹೋದರು.
ಕಾನ್ವೇ-ಫಿಲಿಫ್ಸ್ ಜೊತೆಯಾಟ:
3ನೇ ವಿಕೆಟ್‍ಗೆ ಕಾನ್ವೇ ಜೊತೆಯಾದ ಗ್ಲೆನ್ ಫಿಲಿಪ್ಸ್ ಭರ್ಜರಿಯಾಗಿ ಬ್ಯಾಟ್‍ಬೀಸಿದರು. ತಲಾ ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದರು. ಅಲ್ಲದೇ ಮೂರನೇ ವಿಕೆಟ್‍ಗೆ 86 ರನ್ (63 ಎಸೆತ) ಸಿಡಿಸಿ ತಂಡಕ್ಕೆ ನೆರವಾದರು. ಫಿಲಿಪ್ಸ್ 54 ರನ್ (33 ಎಸೆತ, 5 ಬೌಂಡರಿ, 3 ಸಿಕ್ಸ್) ಮತ್ತು ಕಾನ್ವೇ 59 ರನ್ (49 ಎಸೆತ, 5 ಬೌಂಡರಿ, 2 ಸಿಕ್ಸ್) ಚಚ್ಚಿ ಔಟ್ ಆದರು.
ಸಿರಾಜ್, ಅರ್ಷದೀಪ್ ವಿಕೆಟ್ ಬೇಟೆ:
ಇವರಿಬ್ಬರ ವಿಕೆಟ್ ಪತನದ ಬಳಿಕ ನ್ಯೂಜಿಲೆಂಡ್ ದಿಢೀರ್ ಕುಸಿತ ಕಂಡಿತು. ನಂತರ ಬಂದ ಯಾವೋಬ್ಬ ಬ್ಯಾಟ್ಸ್‌ಮ್ಯಾನ್‌ಗಳಿಗೂ ಭಾರತದ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅಬ್ಬರಿಸಲು ಅವಕಾಶ ನೀಡಲಿಲ್ಲ. ಇವರಿಬ್ಬರೂ ತಲಾ 4 ವಿಕೆಟ್ ಕಿತ್ತು ಮಿಂಚಿದರು. ಅಂತಿಮವಾಗಿ ನ್ಯೂಜಿಲೆಂಡ್ 19.4 ಓವರ್‌ಗಳ ಅಂತ್ಯಕ್ಕೆ 160 ರನ್‍ಗಳಿಸಿ ಆಲೌಟ್ ಆಯಿತು.