ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ ಪಂದ್ಯದ ಎರಡನೇ ದಿನದ ಆಟದ ವೇಳೆ ರಿಷಬ್ ಪಂತ್ ವಿನಾಕಾರಣ ರನೌಟ್ ಆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಪಂತ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ವೆಲ್ಲಿಂಗ್ಟನ್ ಬೇಸಿನ್ ರಿಸರ್ವ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು ಕೇವಲ 122 ರನ್ ಗಳಿಸಿತ್ತು. ಎರಡನೇ ದಿನದಾಟ ಪ್ರಾರಂಭಿಸಿದ ರಿಷಬ್ ಪಂತ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಆಟ ಪ್ರಾರಂಭಿಸಿದ್ದರು. ಆದರೆ ಇನ್ನಿಂಗ್ಸ್ ನ 59ನೇ ಓವರಿನಲ್ಲಿ ಪಂತ್ ಎಡವಟ್ಟು ಮಾಡಿಕೊಂಡು ವಿಕೆಟ್ ಒಪ್ಪಿಸಿದರು. ಬಳಿಕ ಬಂತ ಆಟಗಾರರು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಪರಿಣಾಮ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಎಲ್ಲಾ ವಿಕೆಟ್ ಕಳೆದುಕೊಂಡು 165 ರನ್ ಪೇರಿಸಿತು.
Advertisement
Poor rishabh pant. #nzvind Rishabh Pant pic.twitter.com/0VyjUuUl2g
— Johnson (@Shubham22605990) February 22, 2020
Advertisement
ಪಂದ್ಯದ 59ನೇ ಓವರಿನ 2ನೇ ಎಸೆತದಲ್ಲಿ ಸ್ಟ್ರೈಕ್‍ನಲ್ಲಿದ್ದ ಅಜಿಂಕ್ಯ ರಹಾನೆ ಹಾಫ್ ಸೈಡ್‍ಗೆ ಬಾಲ್ ಅನ್ನು ಅಟ್ಟಿ ಒಂಟಿ ರನ್ ಗಳಿಸಲು ಯತ್ನಿಸಿದರು. ಈ ವೇಳೆ ಫೀಲ್ಡರ್ ಬಾಲ್‍ಅನ್ನು ಬೇಗ ಹಿಡಿದಿದ್ದರಿಂದ ಪಂತ್ ರನ್ ಬೇಡ ಎಂದು ನಿಲ್ಲಿಸಿದರು. ಆದರೆ ರಹಾನೆ ಅದಾಗಲೇ ಅರ್ಧ ಕ್ರಿಸ್ ಮಧ್ಯಕ್ಕೆ ಬಂದಿದ್ದರು. ಫೀಲ್ಡರ್ ಚೆಂಡನ್ನು ವಿಕೆಟ್‍ಗೆ ಥ್ರೋ ಮಾಡಿದ್ದರಿಂದ ವಿನಾಕಾರಣ ಪಂತ್ ಸ್ಟ್ರೈಕ್‍ಗೆ ಓಡಿ ಔಟ್ ಆದರು.
Advertisement
‘ರನ್ ಓಡದೇ ಬಾಲ್ ಎಲ್ಲಿದೆ ಎಂದು ನೋಡಲು ಪಂತ್ ಪ್ರಯತ್ನಿಸುತ್ತಿದ್ದರು. ಅದು ಅವರಿಗೆ ಹಿಂಜರಿಕೆಯನ್ನು ಉಂಟುಮಾಡಿತು’ ಎಂದು ನಿರೂಪಕ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಇದೇ ವೇಳೆ ಸಹ ನಿರೂಪಕ ಸ್ಕಾಟ್ ಸ್ಟೈರಿಸ್ ಅವರು, ‘ನಿಮ್ಮ ಜೊತೆಗಾರರನ್ನು ನೀವು ನಂಬಬೇಕು. ಅಜಿಂಕ್ಯ ರಹಾನೆ ಅವರನ್ನು ನಂಬದ ಪಂತ್ ನಿರಾಶೆಗೆ ತುತ್ತಾದರು ಎಂದು ಹೇಳಿದ್ದಾರೆ.
Advertisement
https://twitter.com/DeepPhuyal/status/1231043063096762369
ಪಂತ್ ತನ್ನ ಜೊತೆಗಾರರನ್ನು ನಂಬಿ ಓಡಿದ್ದರೆ ರನ್ ಗಳಿಸಿ ವಿಕೆಟ್ ಉಳಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಫೀಲ್ಡರ್ ಕೂಡ ಬಹುಬೇಗ ಬಾಲ್ ಹಿಡಿದು ಎಸೆಯುತ್ತಿರಲಿಲ್ಲ. ಆದರೆ ಬ್ಯಾಟ್ಸ್‍ಮನ್‍ಗಳ ಮಧ್ಯೆ ಇದ್ದ ಗೊಂದಲ ಅರಿತ ಫೀಲ್ಡರ್ ವಿಕೆಟ್‍ಗೆ ಬಾಲ್ ಎಸೆದರು. ರಹಾನೆ ಜೊತೆಗಾರರು ನಂಬಬಹುದಾದ ವ್ಯಕ್ತಿ’ ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
63 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜಿಂಕ್ಯೆ ರಹಾನೆ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ. ಅಷ್ಟೇ ಅಲ್ಲದೆ ಯಾವುದೇ ಜೊತೆಗಾರರು ಕೂಡ ರನೌಟ್ ಆಗಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ರಿಷಬ್ ಪಂತ್ ವಿನಾಕಾರಣ ರನೌಟ್ ಆಗುವ ವಿಕೆಟ್ ಕಳೆದುಕೊಂಡರು.
That's stumps on Day 2.
New Zealand score 216/5 and lead by 51 runs. @ImIshant picks three wickets. #NZvIND.
Will be an interesting Day 3 tomorrow.
Scorecard ???????? https://t.co/tW3NpQIHJT pic.twitter.com/t5nUKhU9FH
— BCCI (@BCCI) February 22, 2020