ವೆಲ್ಲಿಂಗ್ಟನ್: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆಥಿತ್ಯದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ಗೆ (T20I WC) ನ್ಯೂಜಿಲೆಂಡ್ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದಲ್ಲಿ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ನ್ಯೂಜಿಲ್ಯಾಂಡ್ನ (New Zealand) ಆಯ್ಕೆದಾರ ಸ್ಯಾಮ್ ವೆಲ್ಸ್ ಬಹಿರಂಗಪಡಿಸಿದ ಅಧಿಕೃತ ತಂಡದ ಪ್ರಕಟಣೆಯಲ್ಲಿ, ಕೇನ್ ವಿಲಿಯಮ್ಸನ್ ನಾಯಕನಾಗಿ ತಮ್ಮ 4ನೇ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಒಟ್ಟಾರೆ ವಿಲಿಯಮ್ಸನ್ 6 ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದಾರೆ. ಇದನ್ನೂ ಓದಿ: 10 ಸಿಕ್ಸರ್‌ನೊಂದಿಗೆ ಸ್ಫೋಟಕ ಶತಕ – ಆರ್‌ಸಿಬಿಗೆ ವಿಲ್ ಪವರ್; ಟೈಟಾನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ
Advertisement
Advertisement
ಟಿ20 ವಿಶ್ವಕಪ್ ತಂಡದ ಅನುಭವಿಗಳ ಸಾಲಿನಲ್ಲಿ ವಿಲಿಯಮ್ಸನ್ ಒಬ್ಬರೇ ಅಲ್ಲ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಿಮ್ ಸೌಥಿ ಆಡಲಿದ್ದಾರೆ, ಸೌಥಿಗೆ ಇದು 7ನೇ ಅಂತಾರಾಷ್ಟ್ರೀಯ ಟೂರ್ನಿಯಾಗಿದೆ. ಇದರೊಂದಿಗೆ 5 ಟಿ20 ವಿಶ್ವಕಪ್ ಪಂದ್ಯಗಳನ್ನಾಡಿರುವ ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ಅನೇಕ ಪ್ರಬಲ ಸ್ಪರ್ಧಿಗಳು ಕಿವೀಸ್ ತಂಡದಲ್ಲಿದ್ದಾರೆ. ಇದನ್ನೂ ಓದಿ: ರೈಸ್ ಆಗಿದ್ದ ಸನ್ ತಾಪ ಇಳಿಸಿದ ಚೆನ್ನೈ; ಸಿಎಸ್‌ಕೆಗೆ 78 ರನ್‌ಗಳ ಭರ್ಜರಿ ಜಯ – 3ನೇ ಸ್ಥಾನಕ್ಕೆ ಜಿಗಿದ ಹಾಲಿ ಚಾಂಪಿಯನ್ಸ್!
Advertisement
Advertisement
ಕಿವೀಸ್ ತಂಡ ಹೇಗಿದೆ?
ಕೇನ್ ವಿಲಿಯಮ್ಸನ್, ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕಲ್ ಬ್ರೇಸ್‌ವೆಲ್, ಚಾಪ್‌ಮನ್, ಡಿವೋನ್ ಕಾನ್ವೆ, ಲಾಕಿ ಫರ್ಗೂಸನ್, ಹೆನ್ರಿ, ಡೇರಿಲ್ ಮಿಚೆಲ್, ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಸೋಧಿ, ಟಿಮ್ ಸೌಥಿ.
2 ಬಾರಿ ಸೆಮಿಸ್, 1 ಬಾರಿ ಫೈನಲ್:
ಕೇನ್ ವಿಲಿಯಮ್ಸನ್ 4 ಬಾರಿ ಟಿ20 ವಿಶ್ವಕಪ್‌ನಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಕೇನ್ ನಾಯಕತ್ವದಲ್ಲಿ ಕಿವೀಸ್ ತಂಡವು 2016 ಮತ್ತು 2022ರಲ್ಲಿ ಸೆಮಿ ಫೈನಲ್ ಪ್ರವೇಶಿಸಿತ್ತು. 2021ರಲ್ಲಿ ಒಮ್ಮೆ ಫೈನಲ್ ಪ್ರವೇಶಿಸಿತ್ತು.